ದುಬೈ: ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಸಂಸ್ಥೆಗಳು ನೌಕರರ ಕೆಲಸದ ಸಮಯದಲ್ಲಿ ರಿಯಾಯತಿಯನ್ನು ನೀಡಬೇಕೆಂದು ಯುಎಇ ಕಾರ್ಮಿಕ ಸಚಿವಾಲಯ ಒತ್ತಾಯಿಸಿದೆ. ನೌಕರರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.
ಯುಎಇ ಅಧಿಕಾರಿಗಳು ಕೆಟ್ಟ ವಾತಾವರಣದಲ್ಲಿ ಉದ್ಯೋಗ ಸಮಯದಲ್ಲಿ ವಿನಾಯಿತಿಗೆ ಕರೆ ನೀಡಿದ್ದು, ಹವಾಮಾನ ಕೆಟ್ಟದಾಗಿದ್ದರೆ, ಕೆಲಸದ ಸಮಯದಲ್ಲಿ ರಾಜಿ ಮಾಡಿಕೊಳ್ಳಲು ತಯಾರಾಗಬೇಕು ಮಳೆ ಮತ್ತು ಮಂಜಿನ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಂಸ್ಥೆಗಳು ಕಾರ್ಮಿಕರ ಪ್ರಯಾಣ ಸುರಕ್ಷಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಕಳೆದ ವರ್ಷ ಸಚಿವಾಲಯ ಹೊರಡಿಸಿದ ಸುತ್ತೋಲೆಯನ್ನು ಉಲ್ಲೇಖಿಸಿ ಸಚಿವಾಲಯ ಮತ್ತೆ ನಿರ್ದೇಶನ ನೀಡಿದೆ.
ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಉದ್ಯೋಗದಾತರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಜಾಗರೂಕರಾಗಿರಬೇಕು. ನೌಕರರು ಕೆಲಸಕ್ಕೆ ತಡವಾಗಿ ಬರಬಹುದು ಎಂಬುದನ್ಬು ಪರಿಗಣಿಸಬೇಕು. ಈ ಸಂದರ್ಭಗಳಲ್ಲಿ ಸ್ವಯಂ ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ನೌಕರರಿಗೆ ತಿಳಿಸಲು ಸಚಿವಾಲಯ ಟ್ವಿಟರ್ ಮೂಲಕ ಕರೆ ನೀಡಿದೆ. ಇದನ್ನು ಉಲ್ಲೇಖಿಸಿ ಸಚಿವಾಲಯ ವಿಡಿಯೋ ಕೂಡ ಬಿಡುಗಡೆ ಮಾಡಿದೆ.