ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಕೇರಳ ಮುಸ್ಲಿಂ ಜಮಾಅತ್ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಸಮಸ್ತ ಕೇರಳ ಜಮ್ ಇಯತುಲ್ ಉಲಮಾ ಮುಶಾವರದ ತೀರ್ಮಾನದಂತೆ ಈ ಮನವಿ ಸಲ್ಲಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಸಂವಿಧಾನದ 14 ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಿರುವಂತೆ ಸಮಾನ ಕಾನೂನು ಮತ್ತು ಸಮಾನ ಹಕ್ಕುಗಳನ್ನು ಉಲ್ಲಂಘಿಸಲಾಗಿದ್ದು ಆದ್ದರಿಂದ ಈ ಕಾಯ್ದೆಯು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಮನವಿ ಮಾಡಿ, ವಕೀಲರಾದ ಹರ್ಷದ್ ವಿ, ಹಮೀದ್, ದಿಲೀಪ್ ಪುಲುಕೋಟ್ ಮೂಲಕ ಅರ್ಜಿಯನ್ನು ಸಲ್ಲಿಸಲಾಯಿತು.
ಎಲ್ಲಾ ಕಾನೂನಾತ್ಮಕ ವಿಧಾನದಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ಮುಂದುವರಿಸಲಾಗುವುದೆಂದು ಮುಸ್ಲಿಂ ಜಮಾಅತ್ ಕೇರಳ ರಾಜ್ಯಾಧ್ಯಕ್ಷರಾದ, ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.