janadhvani

Kannada Online News Paper

ಭಾರತಕ್ಕೆ ಭೇಟಿ ನೀಡುವ ಯುಎಇ, ಸೌದಿ ಪ್ರಜೆಗಳು ಎಚ್ಚರ ವಹಿಸಲು ಸೂಚನೆ

ನವದೆಹಲಿ: ಪೌರತ್ವ ಸಂಬಂಧಿತ ಪ್ರತಿಭಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಸೌದಿ ಪ್ರಜೆಗಳು ಎಚ್ಚರವಹಿಸುವಂತೆ ನವದೆಹಲಿಯ ಸೌದಿ ಅರೇಬಿಯಾ ಹಾಗೂ ಯುಎಇ ರಾಯಭಾರ ಕಚೇರಿಯು ಎಚ್ಚರಿಕೆ ನೀಡಿದೆ.

ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಆ ಸ್ಥಳಗಳಲ್ಲಿ ಸುತ್ತಾಡುವುದನ್ನು ತಪ್ಪಿಸಬೇಕು. ಸಹಾಯ ಅಗತ್ಯವಿರುವವರು ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೌದಿ ರಾಯಭಾರ ಕಚೇರಿ ಪ್ರಕಟನೆ ನೀಡಿದೆ. ಈ ಹಿಂದೆ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾ ತಮ್ಮ ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿತ್ತು.