janadhvani

Kannada Online News Paper

ಸೌದಿ: ಶವರ್ಮಾ ಸೇವಿಸಿ 140 ಮಂದಿ ಅಸ್ವಸ್ಥ

ರಿಯಾದ್: ಸೌದಿ ಅರೇಬಿಯಾದಲ್ಲಿ ಸುಮಾರು 140 ಜನರು ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ. ಅಬಹ -ಮಾಹಾದಲ್ಲಿ ಅಸೀರ್‌ನ ಬಹರ್ ಅಬುಸಕೀನಾ ರೆಸ್ಟೋರೆಂಟ್‌ನಲ್ಲಿ ಈ ದುರ್ಘಟನೆ ನಡೆದಿದೆ.

ಇದರ ಬೆನ್ನಲ್ಲೇ ಭದ್ರತಾ ಇಲಾಖೆಯು ರೆಸ್ಟೋರೆಂಟ್‌ನ ಎಲ್ಲ ನೌಕರರನ್ನು ವಶಕ್ಕೆ ತೆಗೆದುಕೊಂಡಿದೆ. ಮೊದಲ ಪ್ರಕರಣ ದಾಖಲಿಸಿದ 12 ಗಂಟೆಗಳ ನಂತರ ಅನೇಕ ಜನರು ಬಹರ್ ಅಬುಸಕೀನಾದ ಆರೋಗ್ಯ ಕೇಂದ್ರ ಮತ್ತು ಇತರ ಆಸ್ಪತ್ರೆಗಳಲ್ಲಿ ಅದೇ ರೋಗಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆದರು. ಚೇತರಿಕೆಗೊಂಡಿದ್ದ ಕೆಲವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.