ಕಾವಳಕಟ್ಟೆ : ಅಲ್ ಖಾದಿಸ ಸಂಸ್ಥೆಯ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಇದರ ವಿದ್ಯಾರ್ಥಿ ಪ್ರತಿಭೆಗಳ ಸಾಹಿತ್ಯ ಸ್ಪರ್ಧೆ ‘ಚಮಕ್ 2020’ ಇದರ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಜುಂದುಲ್ ಅಕ್ಮಲ್, ಜುಂದುಲ್ ಅಫ್ಲಲ್ ಹಾಗೂ ಜುಂದುಲ್ ಅಜ್ಮಲ್ ಎಂಬ ಮೂರು ಗುಂಪುಗಳಾಗಿ ವಿಂಗಡಿಸಲಾಗಿದ್ದು ನೂರರಷ್ಟು ವೇದಿಕೆ ಹಾಗೂ ವೇದಿಕೆಯೇತರ ಸ್ಪರ್ಧೆಗಳು ನಡೆಯಲಿದೆ.
ವೇದಿಕೆ ಸ್ಪರ್ಧೆಗಳು ಜನವರಿ 2ರಿಂದ 5ರವರೆಗೆ ಎರಡು ವೇದಿಕೆಗಳಲ್ಲಿ ನಡೆಯಲಿದ್ದು ಜನವರಿ 5ರಂದು ಸಂಜೆ ಸಮಾರೋಪಗೊಳ್ಳಲಿದೆ.
ಸಂಸ್ಥೆಯ ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ, ಜಿಎಂ ಶಫೀಕ್ ಸಖಾಫಿ, ಸಾಜಿದ್ ಹಿಮಮಿ ಸಖಾಫಿ, ಮುಬಶ್ಶಿರ್ ಮುಈನಿ ಸಖಾಫಿ, ಮೌಲಾನ ಶುಕ್ರುಲ್ಲಾ ಹಝ್ರತ್, ಮೌಲಾನ ಅತ್ವಾವುಲ್ಲಾ ರಝ್ವಿ ಹಾಜರಿದ್ದರು.