ರಿಯಾದ್: ಸ್ವದೇಶೀ ಪ್ರಜೆಗಳಿಗಾಗಿ ಕಾಯ್ದಿರಿಸಿದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿಯರನ್ನು ಬಂಧಿಸಲಾಗಿದೆ. ರಿಯಾದ್‌ನ ಮೊಬೈಲ್ ಫೋನ್ ಮಾರಾಟ ಕೇಂದ್ರಗಳಲ್ಲಿ ತಪಾಸಣೆ ನಡೆಸಿದ ವೇಳೆ 41 ವಿದೇಶಿ ಕಾರ್ಮಿಕರನ್ನು ಬಂಧಿಸಲಾಗಿದೆ.
ಕಾರ್ಮಿಕ ಸಚಿವಾಲಯದ ಅಧಿಕಾರಿಗಳು ರಿಯಾದ್‌ನ ಪ್ರಮುಖ ಮೊಬೈಲ್ ಫೋನ್ ಮಾರುಕಟ್ಟೆಯಾದ ಮುರ್ಸಲಾತ್‌ನಲ್ಲಿ ಪರಿಶೋಧನೆ ನಡೆಸಿದಾಗ ಈ ವಿದ್ಯಮಾನ ನಡೆದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಖಾಲಿದ್ ಅಬಖೈಲ್ ಈ ಬಗ್ಗೆ ಮಾತನಾಡಿ, ಸ್ಥಳೀಯರಿಗೆ ಕಾಯ್ದಿರಿಸಿದ ಮೊಬೈಲ್ ಫೋನ್‌ಗಳ ಮಾರಾಟ ಮತ್ತು ದುರಸ್ತಿ ಕಾರ್ಯದಲ್ಲಿ ತೊಡಗಿರುವ ವಿದೇಶಿಯರನ್ನು ತಕ್ಷಣವೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸರ ಸಹಕಾರದೊಂದಿಗೆ ಹತ್ತಿರದ ಇತರ ಅಂಗಡಿಗಳು ಮತ್ತು ಗೋದಾಮುಗಳ ಮೇಲೆಯೂ ದಾಳಿ ನಡೆಸಲಾಗಿದೆ. ಬಂಧಿತರನ್ನು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಲಾಗಿದೆ. ಸ್ವದೇಶೀಕರಣ ನಿರ್ಧಾರವನ್ನು ಜಾರಿಗೆ ತರಲಾಗಿದೆಯೇ ಎಂಬುದನ್ನು ಖಾತರಿಪಡಿಸಲು ಮೊಬೈಲ್ ಅಂಗಡಿಗಳ ಪರಿಶೋಧನೆ ಮುಂದುವರಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.