janadhvani

Kannada Online News Paper

ಕಬಕ: ಪೌರ ಸನ್ಮಾನ, ಬೃಹತ್ ಸುನ್ನೀ ಸಮ್ಮೇಳನ-ಸ್ವಾಗತ ಸಮಿತಿ ರಚನೆ

ಪುತ್ತೂರು: ಸೇವಾ ರಂಗದಲ್ಲಿ 50ವರ್ಷ ಪೂರೈಸಿದ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ,30ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ದಾರುಲ್ ಇರ್ಷಾದ್ ಸಂಸ್ಥೆಯ ಶಿಲ್ಪಿ ಝೈನುಲ್ ಉಲಮಾರಿಗೆ ಪೌರ ಸನ್ಮಾನ ಹಾಗೂ ಬೃಹತ್ ಸುನ್ನೀ ಸಮಾವೇಷದ ಸ್ವಾಗತ ಸಮಿತಿ ಕೆ.ಜಿ.ಎನ್ ಮಿತ್ತೂರು ಕ್ಯಾಂಪಸ್ ನಲ್ಲಿ ನಡೆಯಿತು.

ಗೌರಾವಾಧ್ಯಕ್ಷರಾಗಿ ಇಬ್ರಾಹಿಂ ಫೈಝೀ ಕನ್ಯಾನ, ಚೆಯರ್ಮ್ಯಾನ್ ಆಗಿ ಆದಂ ಹಾಜಿ ಪಡೀಲ್, ಕನ್ವೀನರಾಗಿ ಝುಭೈರ್ ಭ್ರೈಟ್ ಪೋಳ್ಯ, ಕೋಶಾಧಿಕಾರಿಯಾಗಿ ಬಶೀರ್ ಹಾಜಿ ಶೇಕಮಲೆ, ವೈಸ್ ಚೆಯರ್ಮ್ಯಾನ್ ಗಳಾಗಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಹಸೈನಾರ್ ಹಾಜಿ ಕೊಡಿಪ್ಪಾಡಿ, ಇಸ್ಮಾಯಿಲ್ ಹಾಜಿ ಬೈತಡ್ಕ ಹಾಗೂ ವೈಸ್ ಕನ್ವೀನರ್ ಗಳಾಗಿ ಶರೀಫ್ ಸಖಾಫಿ ಮಾಣಿ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಶಾಹುಲ್ ಹಮೀದ್ ಕಬಕ ಹಾಗೂ ವಿವಿಧ ಕಮಿಟಿಗಳಿಗೆ ವಿವಿಧ ಮುಖ್ಯಸ್ಥರನ್ನು ನೇಮಿಸಲಾಯಿತು.