ಅಬುಧಾಬಿ: ಯುಎಇಯ ಹೊಸ ಬಜೆಟ್ ವಿಮಾನಯಾನ ಸಂಸ್ಥೆಯಾದ ಏರ್ ಅರೇಬಿಯಾ ಅಬುಧಾಬಿಯು 2020 ರಲ್ಲಿ ಸೇವೆಗಳನ್ನು ಪ್ರಾರಂಭಿಸಲಿದೆ. ಕಡಿಮೆ ದರದ ಏರ್ ಅರೇಬಿಯಾ ಅಬುಧಾಬಿಯು ಮುಂದಿನ ವರ್ಷದ ಮೊದಲಾರ್ಧದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಇತ್ತಿಹಾದ್ ಏವಿಯೇಷನ್ ಗ್ರೂಪ್‌ನ ಸಿಇಒ ಟೋನಿ ಡೌಗ್ಲಾಸ್ ಹೇಳಿದ್ದಾರೆ. ಹೊಸ ವಿಮಾನಯಾನ ಸೇವೆಯು ತುಂಬಾ ಉತ್ತಮವಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಹೊಸ ವಿಮಾನದ ಪ್ರಯಾಣ ದಿನಾಂಕ ಅಥವಾ ಗಮ್ಯಸ್ಥಾನವನ್ನು ಬಹಿರಂಗಪಡಿಸಲು ಡೌಗ್ಲಾಸ್ ನಿರಾಕರಿಸಿದರು, ಆದರೆ 2020 ರ ಮೊದಲಾರ್ಧದಲ್ಲಿ ವಿಮಾನವು ಸೇವೆಯನ್ನು ಪ್ರಾರಂಭಿಸುತ್ತದೆ ಎಂಬುದಾಗಿ ಸುಳಿವು ನೀಡಿದ್ದಾರೆ. ಏರ್ ಅರೇಬಿಯಾ ಮತ್ತು ಯುಎಇಯ ರಾಷ್ಟ್ರೀಯ ವಿಮಾನ ಇತ್ತಿಹಾದ್ ಜಂಟಿಯಾಗಿ ಏರ್ ಅರೇಬಿಯಾ ಅಬುಧಾಬಿಗೆ ಚಾಲನೆ ನೀಡುತ್ತಿವೆ.
ಏರ್ ಅರೇಬಿಯಾವನ್ನು ಬಳಸುವ ಪ್ರಯಾಣಿಕರಿಗೆ, ಅಬುಧಾಬಿಯಿಂದ ಸಂಪರ್ಕವು ಅತ್ಯುತ್ತಮವಾಗಲಿದೆ. ಮುಂದಿನ ವರ್ಷದ ಮೊದಲಾರ್ಧ ಅಥವಾ ದ್ವಿತೀಯಾರ್ಧದಲ್ಲಿ ಅಬುಧಾಬಿಯಿಂದ ಏರ್ ಅರೇಬಿಯಾದಲ್ಲಿ ಹಾರಲು ಬಯಸಿದರೆ, ಅಬುಧಾಬಿಯಲ್ಲಿ ಅವಕಾಶವಿದೆ. ಸಿಇಒ ಟೋನಿ ಡೌಗ್ಲಾಸ್ ಯುಎಸ್ ವಿಮಾನ ತಯಾರಕ ಬೋಯಿಂಗ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸುದ್ದಿಗಾರರಿಗೆ ಈ ಬಗ್ಗೆ ತಿಳಿಸಿದರು.
ಮುಂದಿನ ಕೆಲವು ವಾರಗಳಲ್ಲಿ ಹೊಸ ವಿಮಾನಯಾನ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ಹೇಳಿದರು. ಏರ್ ಅರೇಬಿಯಾ ಮತ್ತು ಫ್ಲೈ ದುಬೈ ನಂತರ ಯುಎಇಯಿಂದ ಹಾರಾಟ ನಡೆಸುವ ಮೂರನೇ ಬಜೆಟ್ ವಿಮಾನಯಾನ ಸಂಸ್ಥೆಯಾಗಲಿದೆ ಏರ್ ಅರೇಬಿಯಾ ಅಬುಧಾಬಿ ಎನ್ನಲಾಗಿದೆ.