janadhvani

Kannada Online News Paper

ಸೌದಿ ಗಸೀಂ ಕೆಸಿಎಫ್: ಉತ್ತರ ಕರ್ನಾಟಕದಲ್ಲಿ ಇಹ್ಸಾನ್ ಸೆಂಟರ್ ಗೆ ಭೂ ನೋಂದಣೆ

ಕಾರಟಗಿ,ನ.19: ಸೌದಿ ಅರೇಬಿಯಾದ ಕೆಸಿಎಫ್ ಅಲ್ ಗಸೀಮ್ ಝೋನ್ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹೃದಯ ಭಾಗದಲ್ಲಿ ತಲೆ ಎತ್ತಲಿರುವ ಇಹ್ಸಾನ್ ಸೆಂಟರ್ ಗೆ ಭೂ ನೋಂದಾವಣೆ ಕಾರ್ಯವು ಇಂದು ನಡೆಯಿತು.

ಕಳೆದ ಹತ್ತು ವರ್ಷಗಳಲ್ಲಿ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಇಹ್ಸಾನ್ ಧಾರ್ಮಿಕ ದಅ್ ವಾ ಚಟುವಟಿಕೆಯೊಂದಿಗೆ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿ/ನಿ ಗಳಿಗೆ ವಿದ್ಯಾಧಾನವನ್ನು ಮಾಡುತ್ತಿದೆ. 25 ಯುವ ವಿದ್ವಾಂಸರ ಪಡೆ (ಇಹ್ಸಾನ್ ದಾಯಿಗಳು) ಹಲವಾರು ಮದ್ರಸಗಳನ್ನು ಈಗಾಗಲೇ ಸ್ಥಾಪಿಸಿದ್ದಾರೆ. ರಾಜ್ಯ SYS SSF ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಕೆಸಿಎಫ್ ನ ವಿವಿದ ಝೋನ್ ಗಳು ಇಹ್ಸಾನ್ ಕರ್ನಾಟಕದ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ.

ಬಹರೈನ್ ಕೆಸಿಎಫ್ ನೇತೃತ್ವದಲ್ಲಿ ಚಿತ್ರದುರ್ಗ, ಸೌದಿ ಅರೇಬಿಯಾ ಕೆಸಿಎಫ್ ನೇತೃತ್ವದಲ್ಲಿ ಹುಬ್ಬಳ್ಳಿ, ಕುವೈಟ್ ಕೆಸಿಎಫ್ ನೇತೃತ್ವದಲ್ಲಿ ಶಿವಮೊಗ್ಗ, ಒಮಾನ್ ಕೆಸಿಎಫ್ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು, ಯುಎಇ ಕೆಸಿಎಫ್ ನ ನೇತೃತ್ವದಲ್ಲಿ ಹರಿಹರ ಸೆಂಟರ್ ಗಳಲ್ಲಿ ಇಹ್ಸಾನ್ ಕರ್ನಾಟಕ ಕಾರ್ಯಾಚರಿಸುತ್ತಿದೆ.

ಇಂದು ನಡೆದ ಕೊಪ್ಪಳ ಜಿಲ್ಲೆಯ ಕಾರಟಗಿ ಸೆಂಟರ್ ನ ಭೂ ನೋಂದಾವಣೆ ವೇಳೆ ಇಹ್ಸಾನ್ ಕರ್ನಾಟಕ ಛೇರ್ಮನ್ ಎನ್ ಕೆ ಎಂ ಶಾಫೀ ಸಅದಿ ಬೆಂಗಳೂರು, ಇಹ್ಸಾನ್ ಸಂಸ್ಥೆಯ ಕಾಮಗಾರಿ ಇಲಾಖೆಯ ಉಸ್ತುವಾರಿ ಹಮೀದ್ ಮುಸ್ಲಿಯಾರ್ ಶಿವಮೊಗ್ಗ, SSF ರಾಜ್ಯ ಉಪಾದ್ಯಕ್ಷ ಖಾಝಿ ಗುಲಾಂ ಹುಸೈನ್ ನೂರಿ, ಜಾಗದ ಮಾಲಿಕ ಸಯ್ಯದ್ ಮುಹಮ್ಮದ್ ಗವೂಸ್ ಭಾಷ, ಸಿವಿಲ್ ಇಂಜಿನಿಯರ್ ನಾಸಿರ್ ಹುಸೈನ್, ಮುಸ್ಲಿಂ ಜಮಾ ಅತ್ ಕೊಪ್ಪಳ ಜಿಲ್ಲಾ ಸಂಚಾಲಕ ಖಾಜಾ ರಝಾ ಮುಸ್ತಫಾ, ಹಝ್ರತ್ ನಝೀರ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.