janadhvani

Kannada Online News Paper

ಕೆಸಿಎಫ್ ಒಮಾನ್ “ಐ ಟೀಮ್” ಮೀಲಾದ್ ಕಾನ್ಫರೆನ್ಸ್

ಒಮಾನ್: ಪ್ರವಾದಿ ಮುಹಮ್ಮದ್(ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಕೆಸಿಎಫ್ ಒಮಾನ್ “ಐ ಟೀಮ್” ವತಿಯಿಂದ ಮೀಲಾದ್ ಕಾನ್ಫರೆನ್ಸ್ ಹಾಗೂ ಮದ್ ಹ್ಹುರ್ರಸೂಲ್ ಕಾರ್ಯಕ್ರಮವು ಇಕ್ಬಾಲ್ ಬರ್ಕರವರ ನಿವಾಸದಲ್ಲಿ ನಡೆಯಿತು.

ಮೌಲೂದ್ ಮಜ್ಲಿಸಿನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶುಕೂರ್ ಇರ್ಫಾನಿ ಚೆಂಬರಿಕ ರವರಿಂದ ಬುರ್ದಾ ಹಾಗೂ ನಅತೇ ಶರೀಫ್ ಕಾರ್ಯಕ್ರಮ ನಡೆಯಿತು. ಹುಬ್ಬುರ್ರಸೂಲ್ ಪ್ರಭಾಷಣವನ್ನು ಕೂಟ್ಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಉಸ್ತಾದರು ನಡೆಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಂತಹ ಶೈಖ್ ಸಾಲಿಂ ಮುಹಮ್ಮದ್ ಅಲ್ ಸಿಯಾಬಿ ಅವರನ್ನು ಸನ್ಮಾನಿಸಲಾಯಿತು.

ಕೆಸಿಎಫ್ ಒಮಾನ್ ಐ ಟೀಮ್ ಚಯರ್ಮೆನ್ ಇಕ್ಬಾಲ್ ಬೊಲ್ಮಾರ್ ಬರ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಮಾನ್ ಕೆಸಿಎಫ್ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಸಂಘಟನಾಧ್ಯಕ್ಷರಾದ ಸೈಯದ್ ಆಬಿದ್ ಅಲ್ ಹೈದ್ರೋಸಿ, ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು, ಝೋನ್ ನಾಯಕರುಗಳು, ಐಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು, ಹಾಗೂ ಕೆಸಿಎಫ್, ಐಟೀಮ್ ಕಾರ್ಯಕರ್ತರು ಉಪಸ್ಥಿತರಿದ್ದರು.