ದುಬೈ: ಸೌದಿ-ಯುಎಇ ಜಂಟಿ ವೀಸಾ ವ್ಯವಸ್ಥೆಯು ಮುಂದಿನ ವರ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಯೋಜನೆಯನ್ನು ಕಾರ್ಯಗತಗೊಳಿಸಿದ ಬಳಿಕ, ಸಂದರ್ಶಕರು ಉಭಯ ದೇಶಗಳ ನಡುವೆ ಪ್ರಯಾಣಿಸಲು ಸಾಧ್ಯವಾಗಲಿದೆ ಎಂದು ಯುಎಇ ಹಣಕಾಸು ಸಚಿವ ಸುಲ್ತಾನ್ ಅಲ್ ಮನ್ಸೂರಿ ಹೇಳಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಮಗ್ರ ಕಾರ್ಯಯೋಜನೆಯು ಆರ್ಥಿಕತೆಗೆ ಪ್ರಯೋಜನಕಾರಿಯಾಗಲಿದೆ ಎಂದು ಜಿಸಿಸಿ ದೇಶಗಳ ಪ್ರವಾಸೋದ್ಯಮ ಮುಖ್ಯಸ್ಥರ ಸಭೆಯಲ್ಲಿ ಸೌದಿ ಅರೇಬಿಯಾ ಈ ಹಿಂದೆ ಘೋಷಿಸಿತ್ತು, ಇದೀಗ ಯುಎಇ ಹಣಕಾಸು ಸಚಿವ ಸುಲ್ತಾನ್ ಅಲ್-ಮನ್ಸೂರಿ ಕೂಡ ಸೌದಿ ಅರೇಬಿಯಾದೊಂದಿಗೆ ಜಂಟಿ ಸಹಭಾಗಿತ್ವದ ವಿಸಾ ಸಂಪ್ರದಾಯ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಯೋಜನೆ ಜಾರಿಗೆ ಬಂದ ಬಳಿಕ ಸೌದಿ ಅರೇಬಿಯಾ ಸಂದರ್ಶಿಸುವ ಪ್ರವಾಸಿಗರಿಗೆ ಯುಎಇಗೆ ಭೇಟಿ ನೀಡಲು ಅವಕಾಶವಿರುತ್ತದೆ ಮತ್ತು ಯುಎಇಗೆ ಭೇಟಿ ನೀಡುವವರಿಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಅವಕಾಶ ಲಭ್ಯವಾಗಲಿದೆ. 2020 ರ ವೇಳೆಗೆ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ ಎಂದರು.
ಉಭಯ ದೇಶಗಳ ಅಧಿಕಾರಿಗಳ ನಡುವೆ ಜಂಟಿ ಸಭೆ ಮತ್ತು ಚರ್ಚೆ ನಡೆಯುತ್ತಿದ್ದು, ಈ ಯೋಜನೆಯನ್ನು ಎರಡೂ ದೇಶಗಳ ವಿಮಾನಯಾನ ಅನುಕೂಲವಾಗುವ ರೀತಿಯಲ್ಲಿ ಮತ್ತು ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಪ್ರವಾಸೋದ್ಯಮ ಮತ್ತು ಹೋಟೆಲ್ ಕ್ಷೇತ್ರದಲ್ಲಿ ಸುಧಾರಣೆ ತರಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಸೌದಿ ಸರಕಾರ ಈವರೆಗೆ ವಿವಿಧ ದೇಶಗಳ ಪ್ರವಾಸಿಗರಿಗೆ ಒಂದು ಲಕ್ಷ (96,000) ವೀಸಾಗಳನ್ನು ನೀಡಿದೆ