janadhvani

Kannada Online News Paper

ಕೆಸಿಎಫ್ ದುಬೈ ನಾರ್ತ್ ಝೋನ್: ಮೀಲಾದ್ ಪ್ರಯುಕ್ತ ಪ್ರತಿಭೋತ್ಸವ- ನ.1 ಕ್ಕೆ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ದುಬೈ ಸಮಿತಿ ವತಿಯಿಂದ ಹಬೀಬ್ ನಮ್ಮ ಜತೆಗಿರಲಿ ಎಂಬ ಶೀರ್ಷಿಕೆಯಲ್ಲಿ ನವಂಬರ್ 22 ರಂದು ದುಬೈ ದೇರಾ ಸಿಟಿ ಸೆಂಟರ್ ಸಮೀಪದ ಪರ್ಲ್ ಸಿಟಿ ಸೂಟ್ ಹೋಟೆಲ್ ಸಂಭಾಂಗಣದಲ್ಲಿ ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.

ಈ ಪ್ರಯುಕ್ತ ಅನಿವಾಸಿ ಕನ್ನಡಿಗರಿಗೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಬರುವ ಶುಕ್ರವಾರ ದಿನಾಂಕ 01/11/2019 ರಂದು ಬೆಳಗ್ಗೆ 9ರಿಂದ ಸಂಜೆ 5 ರ ತನಕ ದೇರಾ ಸಿಟಿ ಸೆಂಟರ್ ಹತ್ತಿರವಿರುವ ಪರ್ಲ್ ಸಿಟಿ ಸೂಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಖಿರಾಅತ್, ಕನ್ನಡ ಇಂಗ್ಲಿಷ್ ಮಲಯಾಳಂ ಭಾಷೆಗಳಲ್ಲಿ ಭಾಷಣಗಳು, ಪದ್ಯ, ಮಾಪಿಳಪ್ಪಾಟ್, ಅರೇಬಿಕ್ ಹಾಡು, ಕವನ ರಚನೆ, ಕ್ವಿಝ್ ಮುಂತಾದ ವಿಷಯಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು ಹಾಗು ಸಾಮಾನ್ಯ ಎಂಬ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ, ದ್ವಿತೀಯ, ಬಹುಮಾನ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುವುದು. ಸ್ತ್ರೀಯರಿಗಾಗಿ ವಿಶೇಷ ಪ್ರಭಂದ ಸ್ಪರ್ಧೆ ನಡೆಯಲಿದೆ.

ದುಬೈಯಾದ್ಯಂತ ದೇರಾ, ಹೋರ್ ಅಲ್ ಅನ್ಝ್ ಮತ್ತು ಅಲ್ ಕಿಸೈಸ್ ಭಾಗದಲ್ಲಿ ವಾಸವಿರುವ ಎಲ್ಲಾ ಅನಿವಾಸಿ ಕನ್ನಡಿಗರಾದ ಪ್ರತಿಭೆಗಳು ವಿಶೇಷವಾಗಿ ಫ್ಯಾಮಿಲಿಗಳು ಇದರ ಸದುಪಯೋಗ ಪಡೆಯಬೇಕಾಗಿ ಕೆಸಿಎಫ್ ದುಬೈ ನಾರ್ತ್ ಪ್ರತಿಭೋತ್ಸವ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಹಾಗೂ ಜನರಲ್ ಕನ್ವೀನರ್ ಕಲಂದರ್ ಕಬಕ ರವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

055- 9565153
050-3139568