janadhvani

Kannada Online News Paper

ಅಹ್ಸನಿ ಉಸ್ತಾದರ ಶಿಷ್ಯ ವೃಂದ ಅಸ್ತಿತ್ವಕ್ಕೆ

ಬಜ್ಪೆ : ಶೈಖುನಾ ಅಬ್ದುಲ್ಲ ಅಹ್ಸನಿ ಉಸ್ತಾದರ ಶಿಷ್ಯ ಸಂಗಮವು ಇಲ್ಲಿನ ಬಜ್ಪೆ ಕೇಂದ್ರ ಮಸೀದಿಯಲ್ಲಿ ನಡೆಯಿತು.

ಧಾರ್ಮಿಕ ಜ್ಞಾನ ಧಾರೆಯೆರೆದುಕೊಡುವಲ್ಲಿ 2 ದಶಕಗಳನ್ನು ಪೂರ್ತೀಕರಿಸಿದ ಶೈಖುನಾ ಪುಂಜಾಲಕಟ್ಟೆ ಅಬ್ದುಲ್ಲ ಅಹ್ಸನಿ ಉಸ್ತಾದರಿಗೆ ಸನ್ಮಾನ ಮಾಡಲಾಯಿತು.ಇದೇ ಸಂದರ್ಭ ನೂತನವಾಗಿ ಶಿಷ್ಯ ಸಂಘಟನೆಗೆ ಚಾಲನೆ ನೀಡಲಾಯಿತು.ಅಧ್ಯಕ್ಷರಾಗಿ ಮುನೀರ್ ಕಾಮಿಲ್ ಸಖಾಫಿ ಉಳ್ಳಾಲ,ಉಪಾಧ್ಯಕ್ಷರಾಗಿ ಹನೀಫ್ ಕೊಡಗು,ಮುಸ್ತಫಾ ಹಿಮಮಿ ಗೇರುಕಟ್ಟೆ,ಮುಸ್ತಫಾ ಸಅದಿ ಕಡಬ,ಪ್ರ.ಕಾರ್ಯದರ್ಶಿಯಾಗಿ ಯಾಕುಬ್ ಮದನಿ ನೂಜಿ,ಜೊತೆ ಕಾರ್ಯದರ್ಶಿಗಳಾಗಿ ನೌಷಾದ್ ಸಖಾಫಿ ತಲಕ್ಕಿ,ಇಲ್ಯಾಸ್ ತಲಕ್ಕಿ,ಮಹ್ ರೂಫ್ ಆತೂರು,ಕೋಶಾಧಿಕಾರಿಯಾಗಿ ಹನೀಫ್ ಸಅದಿ ಕುಂತೂರು ಅವರನ್ನು ನೇಮಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಜೆ.ಎಂ ಬಜ್ಪೆ ಅಧ್ಯಕ್ಷರಾಗಿರುವ ಇಸ್ಮಾಯಿಲ್ ಹಾಜಿ ಜಾವಳೆ ಸಹಿತ ವಿವಿಧ ಅತಿಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಇಲ್ಯಾಸ್ ತಲಕ್ಕಿ ಸ್ವಾಗತಿಸಿ,ಸಂಶುದ್ದೀನ್ ತೀರ್ಥಹಳ್ಳಿ ವಂದಿಸಿದರು.