janadhvani

Kannada Online News Paper

_ಅಲ್ ಹಸ್ಸಾ ಸೆಕ್ಟರ್ ನಲ್ಲಿ ಉದ್ಘಾಟನೆಯಾದ ಅಸ್ಸುಫ್ಪಾ 4 ನೇ ಹಂತದ ತರಗತಿ

ಅಲ್ ಹಸ್ಸಾ: ಸೌದಿ ಅರೇಬಿಯಾದ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ನಾಯಕತ್ವದಲ್ಲಿ ಸೌದಿ ಯಾದ್ಯಂತ ಕೆ.ಸಿ.ಎಫ್ ನ ವಿವಿಧ ಸೆಂಟರ್ ಗಳಲ್ಲಿ ಅಸ್ಸುಫ್ಪಾ ತರಗತಿ 4 ನೇ ಹಂತದ ಉದ್ಘಾಟನಾ ಸಮಾರಂಭವು ನಡೆಯುತ್ತಿದ್ದು, ಇದರ ಭಾಗವಾಗಿ ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ನಲ್ಲಿ ಅಸ್ಸುಫ್ಪಾ ತರಗತಿಯು ಯಶಸ್ವಿಯಾಗಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಸೆಕ್ಟರ್ ಅಧ್ಯಕ್ಷರಾದ ಹಬೀಬ್ ಮರ್ದಾಳ ರವರು ಅಧ್ಯಕ್ಷತೆಯನ್ನು ವಹಿಸಿದರು. ಕೆ.ಸಿ.ಎಫ್ ದಮ್ಮಾಮ್ ಝೋನ್ ಉಸ್ತಾದ್ ಉಮರುಲ್ ಫಾರೂಕ್ ಬಾ ಅಹ್ಸನಿ ಕೆ.ಸಿ.ಎಫ್ ಸಂಘಟನೆಯು ಪ್ರವಾಸಿ ಸ್ನೇಹಿತರ ಒಳಿತಿಗಾಗಿ, ಹಾಗೂ ಪರಲೋಕದ ವಿಜಯಕ್ಕಾಗಿ ಅಸ್ಸುಫ್ಪಾ ತರಗತಿ ಎಂಬ ಮಹತ್ತರವಾದ ಪದ್ದತಿಯನ್ನು ನಮಗೆ ಪರಿಚಯಿಸಿ ಕೊಟ್ಟಿದೆ, ಅದನ್ನು ಸರ್ವ ಪ್ರವಾಸಿ ಕಾರ್ಯಕರ್ತರು ಸದುಪಯೋಗ ಪಡೆದು ಕೊಳ್ಳಬೇಕೆಂದು ಕರೆ ನೀಡಿ ಅಸ್ಸುಫ್ಪಾ ತರಗತಿಯನ್ನು ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದರು.

ಬಳಿಕ ತರಗತಿಗೆ ಹಾಜರಾದ ವಿಧ್ಯಾರ್ಥಿಗಳಿಗೆ ಕೆ.ಸಿ.ಎಫ್. ಅಲ್ ಹಸ್ಸಾ ಸೆಕ್ಟರ್ ಟ್ಯೂಟರಾದ ಇಬ್ರಾಹಿಂ ಸ ಅದಿ ಮಚ್ಚಂಪಾಡಿ ಯವರು ತನ್ನ ಅತ್ಯದ್ಭುತವಾದ ಶೈಲಿಯ ಮೂಲಕ ಕುರ್ ಅನಿನ ತಜ್ವೀದ್ ನಿಯಮಗಳ ತರಗತಿಯನ್ನು ನಡೆಸಿ ವಿಧ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ತರಗತಿಗೆ ಹಾಜರಾದ ವಿದ್ಯಾರ್ಥಿಗಳು ಅಸ್ಸುಫ್ಪಾ ಶಿಕ್ಷಣ ಪದ್ದತಿಯನ್ನು ಪ್ರವಾಸಿ ರಂಗದಲ್ಲಿ ಜಾರಿಗೆ ತಂದ ಕೆ.ಸಿ.ಎಫ್ ಸಂಘಟನೆಗೆ ಕೃತಜ್ಞತೆ ಸಲ್ಲಿಸುವ ಮೂಲಕ ತನ್ನ ಸಂತೋಷವನ್ನು ವ್ಯಕ್ತ ಪಡಿಸಿದರು.

ವರದಿ : ಅಶ್ರಫ್ ಕಟ್ಟದಪಡ್ಪು.

error: Content is protected !! Not allowed copy content from janadhvani.com