ಉಪ್ಪಿನಂಗಡಿ,ಅ19:ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬೇಡಿಕೆಯ ಪತ್ರ ಎರಡು ದಿವಸದ ಮೊದಲು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.ಉಪ್ಪಿನಂಗಡಿಯ ಪೇಟೆಯಿಂದ ಸರಕಾರಿ ಕಾಲೇಜು ತನಕ ನಡೆದುಕೊಂಡು ಹೋಗುವಾಗ ಇಲ್ಲಿನ ಗಾಂಧಿಪಾರ್ಕ್ ಬಳಿಯಿಂದ ಹಿರೆಬಂಡಾಡಿ ರಸ್ತೆ ತಿರುವಿನ ತನಕ ಬಹಳ ಕಷ್ಟ ಪಟ್ಟು ನಡೆಯಬೇಕಾಗುತ್ತದೆ.
ಕಾರಣ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಡೆಯುವ ಪಾದಚಾರಿ ದಾರಿಯು ಹುಲ್ಲುಪೊದೆಗಳಿಂದ ತುಂಬಿದ್ದು ಪಾದಚಾರಿ ದಾರಿಯಲ್ಲಿ ನಡೆಯಲು ಸಾಧ್ಯವೆನಿಸುವುದಿಲ್ಲ, ನಮ್ಮ ಶಾಲಾ ಮಕ್ಕಳು,ಸೈಂಟ್ ಮೇರೀಸ್ ವಿದ್ಯಾ ಸಂಸ್ಥೆಯ ಸಣ್ಣ ಸಣ್ಣ ಮಕ್ಕಳು ಕಿರಿದಾದ ಹುಲ್ಲುಗಳಿಂದಾವೃತವಾದ ಪಾದಚಾರಿ ದಾರಿಯಲ್ಲಿ ನಡೆಯಲು ಪರದಾಡಬೇಕಾಗುತ್ತದೆ.
ಉಪ್ಪಿನಂಗಡಿ ಜಂಕ್ಷನ್ ನಲ್ಲಿ ಸ್ವಚ್ಚತೆಗಾಗಿ ಮುಂಬರುವ ಸಂಘಸಂಸ್ಥೆಗಳು ದಯವಿಟ್ಟು ಇತ್ತ ಗಮನಿಸಿ ಎಂಬ ವಿದ್ಯಾರ್ಥಿಗಳ ಪತ್ರಕ್ಕೆ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ಇಂದು ಪ್ರಾಯೋಗಿಕವಾಗಿ ಪಾದಚಾರಿ ದಾರಿಯಲ್ಲಿನ ಪೊದೆಗಳನ್ನು ಹುಲ್ಲುಗಳನ್ನು ಕತ್ತರಿಸಿ ಸರಿಯಾದ ದಾರಿ ಮಾಡುವ ಮೂಲಕ ಸ್ವಚ್ಚತೆ ಮಾಡಿ ಪ್ರಾಯೋಗಿಕವಾಗಿ ಉತ್ತರ ಕೊಟ್ಟಿತು.ಸ್ವಚ್ಚತಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ಸಮಿತಿ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.