ಅಬುಧಾಬಿ: ತೂಕ ಇಳಿಸುವ ಉದ್ದೇಶಕ್ಕಾಗಿ ಕಾಫಿ ಉತ್ಪನ್ನವನ್ನು ಮಾರಾಟ ಮಾಡುವುದರ ವಿರುದ್ಧ ಅಬುಧಾಬಿ ಆರೋಗ್ಯ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮಗಳನ್ನೂ ಒಳಗೊಂಡಂತೆ ವ್ಯಾಪಕವಾದ ‘ಲಿಶೋ ಸ್ಲಿಮ್ಮಿಂಗ್ 3-ಇನ್ -1 ತ್ವರಿತ ಕಾಫಿ’ ವಿರುದ್ಧ ಈ ಎಚ್ಚರಿಕೆಯನ್ನು ನೀಡಲಾಗಿದೆ.
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ಲಿಶೋ ಕಾಫಿಯ ಮಾದರಿಗಳು ದೇಹಕ್ಕೆ ಹಾನಿಕಾರಕ ಪದಾರ್ಥಗಳನ್ನು ಹೊಂದಿರುವುದು ಕಂಡುಬಂದಿದ್ದು, ಅವುಗಳನ್ನು ಉಪಯೋಗಿಸುವ ಮೂಲಕ ಹೃದಯಾಘಾತ, ಸ್ಟ್ರಾಕ್ ಮುಂತಾದ ಗಂಭೀರ ರೋಗಗಳು ಉದ್ಭವಿಸುವ ಸಂಭವವಿದೆ ಎಂದಿದೆ.
ಅಧಿಕಾರಿಗಳ ಪ್ರಕಾರ, ತೂಕ ಇಳಿಸುವಿಕೆ ಸಂಬಂಧಿಸಿದಂತೆ 444 ನಕಲಿ ಉತ್ಪನ್ನಗಳನ್ನು ಗುರುತಿಸಲಾಗಿದೆ. ಲಿಶೋ ಕಾಫಿ ಉತ್ಪನ್ನಗಳನ್ನು ಯುಎಇಯಲ್ಲಿ ಕಾನೂನಿನ ಪ್ರಕಾರ ಮಾರಾಟ ಮಾಡಲು ಅನುಮತಿಯಿಲ್ಲ. ವೈದ್ಯಕೀಯ ಉತ್ಪನ್ನಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಮಾಹಿತಿ ನೀಡಬೇಕಾಗಿದೆ.
ತೂಕ ಇಳಿಸುವಿಕೆಯ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಯುಎಇ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಎಫ್ಡಿಎಯಂತಹ ಅಂತಾರಾಷ್ಟ್ರೀಯ ಏಜೆನ್ಸಿಗಳು ನಿಷೇಧಿಸಿದ್ದಾಗಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.






