ಫೋಟೊಗೆ ಪೋಸ್ ಕಡಿಮೆಗೊಳಿಸಿ, ಕೆಲಸ ಮಾಡಿ-ಪ್ರಧಾನಿಗೆ ಕಪಿಲ್ ಸಿಬಲ್ ಸಲಹೆ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರೇ, ಕೆಲಸ ಮಾಡಿ. ಫೋಟೊಗೆ ಪೋಸ್ ಕೊಡುವುದನ್ನು ಕಡಿಮೆ ಮಾಡಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ಭಾರತದ ಆರ್ಥಿಕತೆಯ ಸ್ಥಿತಿ ಶೋಚನೀಯವಾಗಿದೆ ಎಂದು ಅರ್ಥಶಾಸ್ತ್ರದ ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಹೇಳಿದ ಬೆನ್ನಲ್ಲೇ ಪ್ರಧಾನಿಯವರನ್ನು ಉದ್ದೇಶಿಸಿ ಸಿಬಲ್ ಟ್ವೀಟ್ ಮಾಡಿದ್ದಾರೆ.

‘ಮೋದಿಜಿ ಕೇಳುತ್ತಿದ್ದಾರೆಯೇ? ಅಭಿಜಿತ್ ಬ್ಯಾನರ್ಜಿ: 1) ಭಾರತದ ಆರ್ಥಿಕತೆ ಅಲುಗಾಡುತ್ತಿದೆ. 2) ಅಂಕಿಅಂಶಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ. 3) ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಸರಾಸರಿ ಅನುಭೋಗದಲ್ಲಿ ಕುಸಿತವಾಗಿದೆ. 70ರ ದಶಕದ ಬಳಿಕ ಇದುವರೆಗೂ ಹೀಗಾಗಿಲ್ಲ. 4) ನಾವು ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಕೆಲಸ ಮಾಡಿ. ಫೋಟೊಗೆ ಪೋಸ್ ಕಡಿಮೆ ಮಾಡಿ’ ಎಂದು ಟ್ವೀಟ್‌ನಲ್ಲಿ ಸಿಬಲ್ ಉಲ್ಲೇಖಿಸಿದ್ದಾರೆ.

ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಹೇಳಿದ್ದ ಅಭಿಜಿತ್‌ ಬ್ಯಾನರ್ಜಿ, ಆರ್ಥಿಕತೆಗೆ ಸಂಬಧಿಸಿದ ಅಂಕಿಅಂಶಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿದ್ದಕ್ಕೆ ಸರ್ಕಾರವನ್ನು ಟೀಕಿಸಿದ್ದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!