ನವದೆಹಲಿ: ಐಎಸ್ ನಂಟು ಸಂಬಂಧಿಸಿದಂತೆ ದೇಶಾದ್ಯಂತ ಭದ್ರತಾ ಸಂಸ್ಥೆಗಳು 127 ಜನರನ್ನು ಬಂಧಿಸಿವೆ. ಅತಿ ಹೆಚ್ಚು ಬಂಧನಗಳು ತಮಿಳುನಾಡಿನಲ್ಲಿ ನಡೆದಿದ್ದು, ಅಲ್ಲಿ 33 ಮಂದಿ ಬಂಧನಕ್ಕೊಳಗಾಗಿದ್ದಾರೆ.
ಉತ್ತರ ಪ್ರದೇಶ (19), ಕೇರಳ (17), ತೆಲಂಗಾಣ (14), ಮಹಾರಾಷ್ಟ್ರ (12), ಕರ್ನಾಟಕ (8) ಮತ್ತು ದೆಹಲಿ (7) ಬಂಧನ ನಡೆದಿವೆ. ಉತ್ತರಾಖಂಡ, ಬಂಗಾಳ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಗುಜರಾತ್, ಬಿಹಾರ ಮತ್ತು ಮಧ್ಯಪ್ರದೇಶ ಮುಂತಾದ ಕಡೆಯೂ ಬಂಧನ ನಡೆದಿದೆ. ಇವರೆಲ್ಲರೂ ಝಾಕಿರ್ ನಾಯ್ಕ್ ಅವರ ಭಾಷಣಗಳಿಂದ ಪ್ರೇರಿತರಾಗಿದ್ದಾರೆ ಎಂದು ಮಿತ್ತಲ್ ಹೇಳಿದ್ದಾರೆ. ವೀಡಿಯೋ
ಅಲೋಕ್ ಮಿತ್ತಲ್ ಅವರು ತನಿಖಾ ಏಜೆನ್ಸಿಯ (ಎನ್‌ಐಎ) ಉನ್ನತ ಅಧಿಕಾರಿಯಾಗಿದ್ದು, ಭಯೋತ್ಪಾದನಾ ವಿರೋಧಿ ತಂಡಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಭೆಯಲ್ಲಿ ಎನ್‌ಐಎ ನಿರ್ದೇಶಕ ವೈಸಿ ಮೋದಿ ಕೂಡ ದೇಶ ಎದುರಿಸುತ್ತಿರುವ ಭಯೋತ್ಪಾದಕ ಸವಾಲುಗಳ ಬಗ್ಗೆ ಮಾತನಾಡಿದರು. ಬಾಂಗ್ಲಾದೇಶ ಮೂಲದ ಜಮಾಅತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ತನ್ನ ಕಾರ್ಯಾಚರಣೆಯನ್ನು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೂ ವಿಸ್ತರಿಸಿದೆ ಎಂದು ಮೋದಿ ಸೂಚಿಸಿದ್ದಾರೆ.