ಬೆಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ರಾಜ್ಯದ ಎಲ್ಲಾ ಸೆಕ್ಟರ್ ಕೇಂದ್ರಗಳಲ್ಲಿ Qteam ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಪ್ರಯುಕ್ತ ಪೋಸ್ಟರ್ ಪ್ರದರ್ಶನ ಹಾಗೂ ಬೀದಿ ಭಾಷಣಗಳು ನಡೆಯಲಿದೆ.
ಶತಮಾನದ ಅತಿದೊಡ್ಡ ದುರಂತವಾದ ಮಾದಕದ್ರವ್ಯ ಗಳ ದಾಸರಾಗಿ, ಡ್ರಗ್ಸಿಗೆ ಬಲಿಯಾಗಿ ಹಲವು ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ಭವಿಷ್ಯವನ್ನು ನಾಶ ಮಾಡುತ್ತಿದ್ದಾರೆ. ಅನೇಕ ಕುಟುಂಬಗಳು ಛಿದ್ರವಾಗಿ ಹೋಗಿದೆ. ಇದು ಈ ರೀತಿ ಮುಂದುವರಿದರೆ ಭವಿಷ್ಯವೂ ಅತ್ಯಂತ ಭಯಾನಕ ವಾಗಿರಬಹುದು. ಆದ್ದರಿಂದಲೇ ರಾಜ್ಯ ಎಸ್ಸೆಸ್ಸೆಫ್ ಎಲ್ಲಾ ಸೆಕ್ಟರ್ ಕೇಂದ್ರಗಳಲ್ಲಿ ಮಾದಕ ದ್ರವ್ಯ ವಿರುದ್ಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಶಾಲಾ-ಕಾಲೇಜು ಆಭರಣಗಳಿಂದ 100 ಮೀಟರ್ ದೂರದವರೆಗೆ ಯಾವುದೇ ಗುಟ್ಕಾ ಪಾನ್ ಪರಾಗ್ ಸಹಿತ ವಿರುವ ಮಾದಕ ದ್ರವ್ಯಗಳ ಮಾರಾಟ ಕಾನೂನುಬಾಹಿರವಾಗಿ ಇದ್ದರೂ ಕೂಡ ಹಲವು ಕಡೆಗಳಲ್ಲಿ ಇದು ಪಾಲಿಸಲ್ಪಡುತ್ತಿಲ್ಲ. ಈ ಕಾನೂನು ಬಾಹಿರ ಕುಕೃತ್ಯಗಳ ವಿರುದ್ಧ ಬೀದಿಗಿಳಿಯಲು ಹಾಗೂ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಸ್ಸೆಸ್ಸೆಫ್ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ಕೇಂದ್ರಗಳಲ್ಲಿ ಪ್ರಸ್ತುತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಕರೆ ನೀಡಿದೆ.






