ಗುರುಪುರ: SSF ದ.ಕ ಬ್ಲಡ್ ಸೈಬೋ ಇದರ 121ನೇ ಬ್ಲಡ್ ಕ್ಯಾಂಪ್,SSF ಅಮ್ಮುಂಜೆ ಸೆಕ್ಟರ್ ಅಧೀನದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಫಲ್ಗುಣಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಲ್ಲೂರು ಇಲ್ಲಿ ದಿನಾಂಕ 29-9-19 ರಂದು ನಡೆಯಿತು.

ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳ್ ಮಲ್ಲೂರು ದುವಾ ನೆರವೇರಿಸಿದರು. ಅಸಾಸ್ ಸಂಸ್ಥೆಯ ಚೇಯರ್ ಮ್ಯಾನ್ MPM ಅಶ್ರಫ್ ಸಅದಿ ಮಲ್ಲೂರು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ಬು ಮಾಡಿದರು. SSF ಅಮ್ಮುಂಜೆ ಸೆಕ್ಟರ್ ಅಧ್ಯಕ್ಷರಾದ ಸೈಫುಲ್ಲಾ ಸಖಾಫಿ ಬಡಕಬೈಲ್ ಅಧ್ಯಕ್ಷತೆಯನ್ನು ವಹಿಸಿದ್ದರು. SSF ಮೂಡಬೆದ್ರೆ ಡಿವಿಶನ್ ನಜೀಬ್ ಅಹ್ಮದ್ ಕೈಕಂಬ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ SSF ಮೂಡಬಿದ್ರೆ ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ ಗುರುಪುರ, ದ.ಕ ಬ್ಲಡ್ ಸೈಬೋ ಸಂಚಾಲಕರಾದ ಕರೀಂ ಕದ್ಕಾರ್, SSF ಮೂಡಬೆದ್ರೆ ಡಿವಿಶನ್ ಇದರ ಬ್ಲಡ್ ಸೈಬೋ ಕನ್ವೀನರ್ ಆದ ನೌಫಲ್ ಇಂಜಿನಿಯರ್ ದೆಮ್ಮಲೆ, ಮಲ್ಲೂರು ಗ್ರಾಮ ಪಂಚಾಯತ್ ಸದಸ್ಯರಾದ ಹಸನ್ ಬಾವು ಮಲ್ಲೂರು, ಪತ್ರಕರ್ತರಾದ ಜಬ್ಬಾರ್ ಮಲ್ಲೂರು, ಹಾಗೂ ಇತರ ಸಂಘ ಸಂಸ್ಥೆಯ ಕಾರ್ಯಕರ್ತರು ಹಾಗೂ ಪಧಾಧಿಕಾರಿಗಳು ಭಾಗವಹಿಸಿದ್ದರು.
ಶಿಬಿರದಲ್ಲಿ ಒಟ್ಟು 60 ಯೂನಿಟ್ ರಕ್ತ ಶೇಖರಣೆಯಾಗಿದ್ದು,ಮಲ್ಲೂರು ವ್ಯಾಪ್ತಿಯಿಂದ 35, ಉದ್ದಬೆಟ್ಟು ವ್ಯಾಪ್ತಿಯಿಂದ 2, ಅಬ್ಬೆಟ್ಟು ವ್ಯಾಪ್ತಿಯಿಂದ 9, ಅಮ್ಮುಂಜೆ ವ್ಯಾಪ್ತಿಯಿಂದ 12, ಬಡಕಬೈಲ್ ವ್ಯಾಪ್ತಿಯಿಂದ 2 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ವಿಶೇಷವೆನೆಂದರೆ ಕಳೆದ ಬಾರಿ SSF ದ.ಕ ಬ್ಲಡ್ ಸೈಬೋ ಇದರ ಆಶ್ರಯದಲ್ಲಿ ಟೌನ್ ಹಾಲ್ ನಲ್ಲಿ ಆಗಸ್ಟ್ 18 ರಂದು ನಡೆದ 100 ನೇ ರಕ್ತದಾನ ಶಿಬಿರದಲ್ಲಿ ರಕ್ತ ದಾನ ಮಾಡಿದ ಅಮ್ಮುಂಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಖಲೀಲ್ ಅಬ್ಬೆಟ್ಟು, SSF ಅಮ್ಮುಂಜೆ ಸೆಕ್ಟರ್ ಬ್ಲಡ್ ಸೈಬೋ ಕನ್ವೀನರ್ ಆದ MS ಉಬೈದ್ ಮಲ್ಲೂರು, ಸೆಕ್ಟರ್ ಕಾರ್ಯಕಾರಿ ಸದಸ್ಯರಾದ ಶಮೀರ್ ಮಲ್ಲೂರು, ಮಲ್ಲೂರು SSF ಕಾರ್ಯಕರ್ತರಾದ ಝಬೈರ್, ಹಾಗೂ Ms ಸಿರಾಜ್ ಇವರು 40 ದಿನಗಳ ಅಂತರದಲ್ಲಿ 2ನೇ ಬಾರಿ ರಕ್ತದಾನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ವಿಶೇಷವಾಗಿ ಎಲ್ಲಾ ಜಾತಿ ಧರ್ಮಗಳ ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಸೌಹರ್ದತೆಯನ್ನು ಮೆರೆದರು. ಮೇರಮಜಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅನಿಲ್ ಫೆರ್ನಾಂಡಿಸ್ ಅಬ್ಬೆಟ್ಟು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿರುತ್ತಾರೆ.

ರಕ್ತದಾನದ ಉದ್ಘಾಟನೆಯನ್ನು ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳ್ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು SSF ಅಮ್ಮುಂಜೆ ಸೆಕ್ಟರ್ ಉಪಾಧ್ಯಕ್ಷರಾದ ಮನ್ಸೂರ್ ಅಮ್ಮುಂಜೆ ಯವರು ನೇರವೇರಿಸಿದರು.
Reported by-
Khaleel Abbettu
(ಪ್ರಧಾನ ಕಾರ್ಯದರ್ಶಿ SSF ಅಮ್ಮುಂಜೆ ಸೆಕ್ಟರ್)






