janadhvani

Kannada Online News Paper

KCF ಒಮಾನ್ ನಿಜ್ವಾ ಝೋನ್ ಮೆಡಿಕಲ್ ಕ್ಯಾಂಪ್

ಮಸ್ಕತ್: KCF ಒಮಾನ್ ನಿಜ್ವಾ ಝೋನ್ ಹಾಗೂ ಬದ್ರ್ ಅಲ್ ಸಮಾ ಹಾಸ್ಪಿಟಲ್ ನಿಝ್ವ ಇದರ ಅಧೀನದಲ್ಲಿ ಮೆಡಿಕಲ್ ಕ್ಯಾಂಪ್ ಹಾಗೂ ಒಮಾನ್ ಕೆ. ಸಿ. ಎಫ್ ಅಂತಾರಾಷ್ಟ್ರಿಯ ನಾಯಕರಿಗೆ ಸ್ವೀಕರಣಾ ಕಾರ್ಯಕ್ರಮ ಶುಕ್ರವಾರ 27/09/2019 ರಂದು ಸಮಯ 3 ರಿಂದ ರಾತ್ರಿ 10 ಗಂಟೆಯ ವರೆಗೆ ನಿಜ್ವಾ ಲುಲು ಹೈಪರ್ ರ್ಮಾರ್ಕೆಟ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು ಕಾಸಿಂ ಹಾಜಿ ಅಳಕೆಮಜಲ್ ವಹಿಸಿದ್ದರು.
ಅಬ್ದುರ್ರಹ್ಮಾನ್ ಕೋಡಿ ಯವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಬಹು ಉಮರ್ ಸಖಾಫಿ ಮಿತ್ತೂರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಉಮರ್ ಸಖಾಫಿ ಮಿತ್ತೂರು,ಹಾಗೂ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಬಂದಂತಹ ಕಾರ್ಯದರ್ಶಿಯಾದ ಸಾದಿಕ್ ಸುಳ್ಯ ಇವರುಗಳಿಗೆ ಹಾಗೂ ಬದರ್ ಅಲ್ ಸಮಾ ದ Dr ದಾಮೋದರ್ ಪ್ರಭು, Dr ವೆಂಕಟೇಶ್ ಕುಮಾರ್, Dr ಮಕರಂದ್ ಜೌರಿಕರ್, ಬದರ್ ಅಲ್ ಸಮಾ ಮಾರ್ಕೆಟಿಂಗ್ ಮ್ಯಾನೇಜರ್ Mr ಶ್ರೀಜಿತ್, Mr ಸಾಬು ಖಾನ್ ಹಬೀಬ್ ಇವರಿಗೂ,lulu Gm ಮೊಹಮ್ಮದ್ ನವಾಬ್ ಅಲ್ ಖರೋಸಿ ಗ್ರೂಪ್ಸ್ ಡಿಸೈನರ್ ರೋಷ್ ಇವರಿಗೂ ಸನ್ಮಾನಿಸಲಾಯಿತು.

ಇದೇ ವೇದಿಕೆಯಲ್ಲಿ ವಿದೇಶಿ ಜೀವನಕ್ಕೆ ತಾತ್ಕಾಲಿಕ ವಿರಾಮ ಹೇಳಿ ತಾಯಿನಾಡಿಗೆ ಯಾತ್ರೆ ಹೊರಡಲಿರುವ (ದಾರುಲ್ ಇರ್ಷಾದ್ ಮಾಣಿ) ಇದರ ರಿಸೀವರ್ ಅಬ್ದುಲ್ ರಹ್ಮಾನ್ ಕೋಡಿ KCF ಒಮಾನ್ ಕಮೀಟಿ ವತಿಯಿಂದ ಸಹಾಯ ಧನವನ್ನು ನೀಡಲಾಯಿತು.

ಈ ಮೆಡಿಕಲ್ ಕ್ಯಾಂಪ್ ಒಮಾನಿನಾದ್ಯಂತ ಚರಿತ್ರೆ ಸೃಷ್ಟಿಸಿದಂತಹ ಒಂದು ಕ್ಯಾಂಪ್ ಆಗಿ, ಇದರ ಸದುಪಯೋಗ 300 ಕ್ಕಿಂತ ಹೆಚ್ಚು ಮಂದಿ ಪಡೆದು ಕೊಂಡರು.

Dr ದಾಮೋದರ್ ಪ್ರಭು ರವರನ್ನು ಆಬಿದ್ ತಂಗಲ್ ರವರು ಗಲ್ಫ್ ಇಶಾರ ಚಂದಾದಾರರನ್ನಾಗಿ ಮಾಡುವ ಮೂಲಕ ಗಲ್ಫ್ ಇಶಾರ ಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಂದರ್ ಬಾಷಾ ತೀರ್ಥಹಳ್ಳಿ , ಸಾದಿಕ್ ಕೈಕಂಬ, ಇಬ್ರಾಹಿಂ ಮಣಿಪುರ, ಸಿದ್ದೀಕ್ ಉಳ್ಳಾಲ, ಹುಸೈನ್ ತೀರ್ಥಹಳ್ಳಿ, ಹಮೀದ್ ಕಣ್ಣಂಗಾರ್,ರಮೀಜ್ ಕಟಪಾಡಿ, ವಾರಿಸ್ ಮಣಿಪುರ, ಆರಿಫ್ ಮಣಿಪುರ, ರಉಫ್ K C ರೋಡ್, ಮುಸ್ತಫಾ ಮಲ್ಲೂರ್, ಫಯಾಜ್ ಮಲ್ಲೂರ್, ಬದ್ರುದ್ದೀನ್ ಶಕೀರ್, ಬಶೀರ್ ಮಣಿಪುರ, ಆಸಿಫ್ ಕಣ್ಣಂಗಾರ್, ಶಂಶುದ್ದೀನ್ ಉಜಿರೆ, ಫೈಝಲ್ ಕಣ್ಣಂಗಾರ್, ಲತೀಫ್ ಸುಳ್ಯ, ಅಸ್ಲಮ್ ಕುದ್ರೋಳಿ,ಹಸನ್ ಪರಂಗಿಪೇಟೆ, ಅಬ್ಬಾಸ್ ಮರಕ್ಕಡ, ತೌಫೀಕ್ ಕೈಕಂಬ, ಇಮ್ರಾನ್, ಹಾಗೂ ಒಮಾನ್ ನ್ಯಾಷನಲ್ ಕಮೀಟಿ, ಮಸ್ಕತ್ ಝೋನ್, ಬೌಶರ್ ಝೋನ್, ಸೀಬ್ ಝೋನ್ ಇದರ ಬಾರವಾಹಿ ಗಳು ಕೂಡ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಬೀರ್ ಮಿಸ್ಬಾಹಿ ಸ್ವಾಗತಿಸಿ ವಂಧಿಸಿದರು.