ಮುಂಬೈ: ಅಖಿಲ ಭಾರತ ಹಜ್ ಸಮಿತಿ ಆಯೋಜಿಸಿದ್ದ ಹಜ್ ರಿವ್ಯೂ ಸಭೆಯಲ್ಲಿ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಅಭಿನಂದಿಸಲಾಯಿತು. ಮುಂಬೈನಲ್ಲಿ ನಡೆದ ಸಭೆಯಲ್ಲಿ, ಕೇಂದ್ರ ಹಜ್ ಸಮಿತಿಯ ಪ್ರತಿನಿಧಿಗಳು ಮತ್ತು ವಿವಿಧ ರಾಜ್ಯಗಳ ಹಜ್ ಸಮಿತಿಯ ಅಧ್ಯಕ್ಷರು ಭಾಗವಹಿಸಿದ್ದರು.
ಅಭಿನಂದನೆ ಸ್ವೀಕರಿಸಿ, ಮಾತನಾಡಿದ ಕಾಂತಪುರಂ,ಈ ವರ್ಷ ಹಜ್ ಯಾತ್ರಿಕರಿಗೆ ಮಾದರೀಯೋಗ್ಯ ಸೌಲಭ್ಯವನ್ನು ಒದಗಿಸಿಕೊಟ್ಪ ಅನುಕೂಲವನ್ನು ಹಜ್ ಸಮಿತಿಯ ಕ್ರಮ ಶ್ಲಾಘನೀಯ ಎಂದರು. ಮುಂದಿನ ವರ್ಷ ಭಾರತೀಯರು ಹೆಚ್ಚಿನ ಹಜ್ ಅವಕಾಶಗಳನ್ನು ಪಡೆಯಲು ಸೌದಿ ಅರೇಬಿಯಾ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.ಮುಂದಿನ ವರ್ಷದಿಂದ ಹಜ್‌ಗೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಹಜ್ ಸಮಿತಿಯಡಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಸೌದಿ ಹಜ್ ಕಾನ್ಸುಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರ ಹಜ್ ಸಮಿತಿಯ ಅಧ್ಯಕ್ಷ ಹಾಜಿ ಶೈಖ್ ಜಿನಾ ನಬಿ ಅಧ್ಯಕ್ಷತೆ ವಹಿಸಿದ್ದರು.