ಉಳ್ಳಾಲ,ಸೆ.28: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಇದರ ವತಿಯಿಂದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕರ್ನಾಟಕ ರಾಜ್ಯ ಸಮಿತಿ ಸೆಕ್ಟರ್ ಮಟ್ಟದಲ್ಲಿ ನಡೆಸಲು ಕರೆ ನೀಡಿದ ಭಾಗವಾಗಿ ULAZ CAMP-19 ಎಂಬ ವಿಶೇಷ ತರಗತಿಯು ದಿನಾಂಕ:28-9-2019 ಶನಿವಾರ ರಾತ್ರಿ ಮಗ್ರಿಬ್ ನಮಾಜಿನ ಬಳಿಕ ಸುನ್ನೀ ಸೆಂಟರ್ ಖುತುಬಿನಗರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಸಅದಿ, ಸಯ್ಯಿದ್ ಖುಬೈಬ್ ತಂಙಳ್, C.H ಮುಹಮ್ಮದಲಿ ಸಖಾಫಿ ಸುರಿಬೈಲ್, ಮುಸ್ತಫ ನಈಮಿ ಹಾವೇರಿ, ಇರ್ಫಾನ್ ನೂರಾನಿ, ಉಸ್ಮಾನ್ ಝುಹ್ರಿ, ಸಿರಾಜುದ್ದೀನ್ ತಲಪಾಡಿ ಅಲ್ಲದೆ ಇನ್ನಿತರ ಉಮರಾ ನಾಯಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಫಯಾಝ್ ಕಿನ್ಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.