janadhvani

Kannada Online News Paper

ಕೆಸಿಎಫ್ ಅಜ್ಮಾನ್ ಝೋನ್ ಈದ್ ಮಿಲಾದ್ ಸ್ವಾಗತ ಸಮಿತಿ ರಚನೆ

ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಷನ್ ಅಜ್ಮಾನ್ ಝೋನ್ ಯುಎಇ ವತಿಯಿಂದ ನವೆಂಬರ್ 15 ರಂದು ಕ್ರೌನ್ ಪ್ಯಾಲೆಸ್ ಹೋಟೆಲ್ ಅಜ್ಮಾನ್ ಸಭಾಂಗಣದಲ್ಲಿ ನಡೆಯಲಿರುವ ಬೃಹತ್ ಈದ್ ಮಿಲಾದ್ ಕಾನ್ಫರೆನ್ಸ್-2019 ಗೆ ನೂತನ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಕೆಮ್ಮಾರಅಜ್ಮಾನ್, ಉಪಾಧ್ಯಕ್ಷರಾಗಿ ಅನ್ವರ್ ಹುಸೈನ್ ಉಳ್ಳಾಲ ಹಾಗೂ ಜನರಲ್ ಕನ್ವೀನರ್ ಆಗಿ ಅಬೂಬಕ್ಕರ್ ಸಿದ್ದೀಕ್ ಪಾಣೆಮಂಗಳೂರು ಮತ್ತು ಜೊತೆ ಕನ್ವೀನರಾಗಿ ಅಬ್ದುಲ್ ಖಾದರ್ ಕೊಡಿಪ್ಪಾಡಿ, ಕೋಶಾಧಿಕಾರಿಯಾಗಿ ಆದಂ ಈಶ್ವರಮಂಗಿಲ ಆಯ್ಕೆಯಾದರು.

ಪ್ರತಿಭೋತ್ಸವ ಸಮಿತಿ ಅಧ್ಯಕ್ಷರಾಗಿ ಮುಜೀಬ್ ಸಅದಿ ಹಾಗೂ ಕನ್ವೀನರ್ ಆಗಿ ನಿಝಾಮುದ್ದೀನ್ ಮದನಿ ಉರುವಾಲು ಪದವುರವರನ್ನು ಆಯ್ಕೆ ಮಾಡಲಾಯಿತು. ಆರ್ಥಿಕ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಅಲ್ ಸರೋಜ್ ಗಾರ್ಮೆಂಟ್ಸ್ ಮಾಲಕ ಹಸನ್ ಕಂಬಳಬೆಟ್ಟು ಕನ್ವೀನರ್ ಆಗಿ ನೌಶೀಫ್ ಉಳ್ಳಾಲರವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಯಶಸ್ವೀ ನಿರ್ವಹಣೆಗಾಗಿ ಸಾರಿಗೆ ವ್ಯವಸ್ಥೆ, ವೇದಿಕೆ ನಿರ್ವಹಣಾ ಸಮಿತಿ, ಪ್ರಚಾರ ನಿರ್ವಹಣಾ ಸಮಿತಿ, ಆಹಾರ ಪಾನೀಯ ನಿರ್ವಹಣಾ ಸಮಿತಿ, ಫ್ಯಾಮಿಲಿ ಸೆಮಿನಾರ್ ಸಮಿತಿ, ಸ್ವಯಂ ಸೇವಕ ಸಮಿತಿ ಹೀಗೆ ಉಪಸಮಿತಿಗಳನ್ನಾಗಿ ರಚಿಸಿ ಹದಿನೇಳು ಸದಸ್ಯರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com