ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಹಳೆಬೇರು ಹೊಸಚಿಗುರು ಹಾಗೂ ಸನ್ಮಾನ ಕಾರ್ಯಕ್ರಮವು ಡಿವಿಶನ್ ಅಧ್ಯಕ್ಷ ತೌಸೀಫ್ ಸಅದಿ ಹರೇಕಳರವರ ಅಧ್ಯಕ್ಷತೆಯಲ್ಲಿ ಫರೀದ್ ನಗರ ಆಫೀಸಿನಲ್ಲಿ ನಡೆಯಿತು.
ಡಿವಿಶನ್ ಉಪಾಧ್ಯಕ್ಷ ಇಬ್ರಾಹಿಂ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಜಿಲ್ಲಾಧ್ಯಕ್ಷ ಇಸ್‌ಹಾಕ್ ಝುಹ್ರಿ ಸೂರಿಂಜೆ ತರಗತಿ ಮಂಡಿಸಿದರು.
ಈ
ಸಂದರ್ಭದಲ್ಲಿ ಡಿವಿಶನ್ ಗಾಗಿ ದಶಕಗಳಿಂದೀಚೆಗೆ ನಾಯಕತ್ವ ನೀಡಿದ ಎಂಎಂಕೆ ಕಡ್ವಾಯಿ,ಹೈದರ್ ಸಖಾಫಿ ಇನೋಳಿ, ಅಝೀಝ್ ಮದನಿ ಮಲಾರ್, ಹೈದರಲಿ ಹಿಮಮಿ ಮಲಾರ್, ಶರೀಫ್ ಸಅದಿ ಅರಫಾ, ಮಜೀದ್ ಫರೀದ್ ನಗರ, ಅಝೀಝ್ ಹೆಚ್ ಕಲ್, ಹಮೀದ್ ಬಂಡಸಾಲೆ, ಅಶ್ರಫ್ ಹರೇಕಳ, ಅಶ್ರಫ್ ಕಲ್ಕಟ್ಟ ಮುಂತಾದವರನ್ನು ಸನ್ಮಾನಿಸಲಾಯಿತು.
ಡಿವಿಶನ್ ನಾಯಕರಾದ ಸಿದ್ದೀಕ್ ಸಖಾಫಿ ಕಾಯಾರ್, ಶರೀಫ್ ಮುಡಿಪು, ಇಲ್ಯಾಸ್ ಪೊಟ್ಟೊಳಿಕೆ, ಅಬೂಸ್ವಾಲಿಹ್ ಹರೇಕಳ, ಶರೀಫ್ ಪಾಣೇಲ ಮುಂತಾದವರು ಹಾಜರಿದ್ದರು.
ಡಿವಿಶನ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್‌ನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.