ಬುಡೋಳಿ :ಸುನ್ನಿ ಯುವಜನ ಸಂಘ SYS ಶೇರ ಬ್ರಾಂಚ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಲ್ ಹಾಜಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಶೇರ,ಉಪಾಧ್ಯಕ್ಷರಾಗಿ ಶೆರೀಫ್ ಗುಂಡ್ಯಡ್ಕ,ಪ್ರದಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಸಅದಿ ಶೇರ,ಕೋಶಾಧಿಕಾರಿಯಾಗಿ ಉಸ್ಮಾನ್ ಮಡಲ ,ದಅವಾ ಮತ್ತು ಶಿಕ್ಷಣ ಕಾರ್ಯದರ್ಶಿ ಯಾಗಿ ರಫೀಕ್ ಮದನಿ ಶೇರ,ಇಸಾಬ ಮತ್ತು ಸಾಂತ್ವನ ವಿಭಾಗದ ಕಾರ್ಯದರ್ಶಿ ಯಾಗಿ ಮುಸ್ತಫ ಗುಂಡ್ಯಡ್ಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವೀಕ್ಷಕರಾಗಿ ಸೆಂಟರ್ ಕಾರ್ಯದರ್ಶಿ ಹಾಜಿ ಯೂಸುಫ್ ಸಈದ್ ನೇರಳಕಟ್ಟೆ ,ಸೆಂಟರ್ ನಾಯಕರಾದ ಹನೀಫ್ ಮುಸ್ಲಿಯಾರ್ ಪೆರ್ನೆ,ಇಬ್ರಾಹಿಂ ಹಾಜಿ ಪೇರಮುಗೇರ್ ಹಾಜರಿದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಅಬ್ದುಲ್ ಲತೀಫ್ ಸಅದಿ ಸ್ವಾಗತಿಸಿ ಧನ್ಯವಾದಗೈದರು.