ಸಾಲೆತ್ತೂರು: ಸುನ್ನೀ ಯುವಜನ ಸಂಘ SYS ಇದರ ಕಟ್ಟತ್ತಿಲ ಬ್ರಾಂಚಿನ ವಾರ್ಷಿಕ ಮಹಾಸಭೆಯು ಸೆಪ್ಟಂಬರ್ ,26 ರಂದು ಇಶಾ ನಮಾಜಿನ ಬಳಿಕ ನಡೆಯಿತು.
SYS ರಾಜ್ಯಾಧ್ಯಕ್ಷರಾದ ಬಹು:ಜಿ.ಯಂ.ಉಸ್ತಾದ್ ರವರ ಸಮ್ಮುಖದಲ್ಲಿ ನೂತನ ಸಾರಥಿಗಳನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ಲ ಮದನಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ,ಇಕ್ಬಾಲ್ ಮದನಿಯವರನ್ನು ಆಯ್ಕೆಮಾಡಲಾಯಿತು.
ಕೋಶಾಧಿಕಾರಿ, ಉಪಾಧ್ಯಕ್ಷರು ಹಾಗೂ ಶಿಕ್ಷಣ,ವೆಲ್ಫೇರ್ ,ಟೀಮ್ ಇಸಾಬ ಕಾರ್ಯದರ್ಶಿಗಳು ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಹಸನ್ ಅಮಾನಿ, ದಾವುದ್ ಸಖಾಫಿ ಅಝೀಝ್ ಸಖಾಫಿ, ಇಸ್ಮಾಯಿಲ್ ಸಅದಿ ಹಾಗೂ ಹಲವು ನಾಯಕರು ಉಪಸ್ಥಿತರಿದ್ದರು. ಕೊನೆಯಲ್ಲಿ ಕೆ ಯಂ ಮದನಿ ವಂದಿಸಿದರು.