ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ನೇತೃತ್ವದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಮೀಲಾದ್ ರಾಲಿಯು ಇದೇ ಬರುವ 2019 ನವೆಂಬರ್ 7ರಂದು ನಡೆಸಲಿದ್ದು ಅದರ ಯಶಸ್ಸಿಗಾಗಿ ಎಲ್ಲಾ ಸುನ್ನೀ ಸಂಘಟನೆಗಳ ನಾಯಕರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಮಂಗಳೂರಿನ ಪಡೀಲ್ ಇಲ್ಮ್ ಸೆಂಟರ್ ನಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯನ್ನು ಜಂಇಯ್ಯತುಲ್ ಉಲಮಾ ಇದರ ರಾಜ್ಯ ಉಪಾಧ್ಯಕ್ಷರಾದ ಪ್ರೊಫೆಸರ್ ಕೆ ಪಿ ಹುಸೈನ್ ಸಅದಿ ಕೆಸಿರೋಡ್ ಉದ್ಘಾಟಿಸಿದರು. ಡಾ ಎಮ್ಮೆಸ್ಸೆಎಮ್ ಝೈನಿ ಕಾಮಿಲ್ ಚರ್ಚೆಗೆ ನೇತೃತ್ವ ನೀಡಿದರು.
ಸಭೆಯಲ್ಲಿ ಎಸ್ ವೈ ಎಸ್ ಮುಖಂಡರಾದ ಸಯ್ಯಿದ್ ಜಅಫರ್ ತಂಙಳ್ ಕೋಟೇಶ್ವರ,ಸಯ್ಯಿದ್ ಎಸ್ ಎಂ ಕೋಯ ಉಜಿರೆ, ಅಶ್ರಫ್ ಸಅದಿ ಮಲ್ಲೂರು,ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ,ಹನೀಫ್ ಹಾಜಿ ಬೆಜ್ಜವಳ್ಳಿ,ಅಬ್ದುಲ್ ಹಕೀಂ ಕೊಡ್ಲಿಪೇಟೆ, ಕಾಸಿಂ ಪದ್ಮುಂಜ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಎಸ್ ಕೆ ಖಾದರ್ ಹಾಜಿ ಮುಡಿಪು, ಎಸ್ ಎಂ ಬಶೀರ್ ಹಾಜಿ ಕುಂಬ್ರ ಎಸ್ಇಡಿಸಿ ನಾಯಕ ಹಾಫಿಳ್ ಹನೀಫ್ ಮಿಸ್ಬಾಹಿ,ಖಲೀಲ್ ಮುಸ್ಲಿಯಾರ್ ಬೋಳಂತೂರು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಕೆ ಎಂಎಚ್ ಝುಹ್ರಿ ಕೊಂಬಾಳಿ, ಮುಹಮ್ಮದ್ ಅಲಿ ತುರ್ಕಳಿಕೆ, ರಶೀದ್ ವಗ್ಗ, ನವಾಝ್ ಸಖಾಫಿ ಅಡ್ಯಾರ್,ಅಯ್ಯೂಬ್ ಮಹ್ಳರಿ ಕಾವಳಕಟ್ಟೆ ,ಸಯ್ಯಿದ್ ಮಿಹ್ರಾಜ್ ಉಜಿರೆ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾರ್ಯಕ್ರಮದ ನಿರ್ವಹಣೆಗಾಗಿ ಸ್ವಾಗತ ಸಮಿತಿ ಯನ್ನು ರಚಿಸಿದ್ದು.
ಚೇರ್ಮಾನ್ ಆಗಿ ಎಸ್ ಖಾದರ್ ಹಾಜಿ ಮುಡಿಪು, ಜನರಲ್ ಕನ್ವೀನರ್ ಆಗಿ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಕೋಶಾಧಿಕಾರಿಯಾಗಿ ಎಸ್ ಎಂ ಬಶೀರ್ ಹಾಜಿ ಕುಂಬ್ರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಶ್ರಫ್ ಕಿನಾರ ಸ್ವಾಗತಿಸಿ ವಂದಿಸಿದರು.