ಮಂಗಳೂರು: ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾ ಸಮುಚ್ಚಯ ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಗೋಲ್ಡನ್ ಜೂಬಿಲಿ ಯು 2019 ಡಿಸೆಂಬರ್ 27,28,29 ದಿನಾಂಕಗಳಲ್ಲಿ ಸಅದಾಬಾದ್ ನಲ್ಲಿ ನಡೆಯಲಿದ್ದು ಅದರ ಪ್ರಯುಕ್ತ ದ.ಕ ಜಿಲ್ಲಾ ಮಟ್ಟದ ಸಅದೀಸ್ ಸಂಗಮ ಹಾಗೂ ಮಹಾಸಭೆಯು ಮಂಗಳೂರು ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಲ್ಲಿ ಜಿಲ್ಲಾಧ್ಯಕ್ಷ ಯೂಸುಫ್ ಸಅದಿ ಮಠ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಅದೀಸ್ ರಾಜ್ಯಾಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಉದ್ಘಾಟಿಸಿದರು. ಸಅದೀಸ್ ಸಂಗಮದಲ್ಲಿ ಸಅದಿಯ್ಯ ಪ್ರೊಫೆಸರ್ ಕೆ ಪಿ ಹುಸೈನ್ ಸಅದಿ ಕೆಸಿರೋಡ್ ಮುಖ್ಯ ಭಾಷಣ ಮಾಡಿದರು . ಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಚಾರದ ವಿವಿಧ ಯೋಜನೆಗಳನ್ನು ಹಾಫಿಳ್ ಯಾಕೂಬ್ ಸಅದಿ ನಾವೂರು ಮಂಡಿಸಿದರು.
ಕಾರ್ಯಕ್ರಮದಲ್ಲಿ ಹಾಜಿ ಇಬ್ರಾಹಿಮ್ ಸಅದಿ ಮಾಣಿ, ಅಬೂಬಕ್ಕರ್ ಸಅದಿ ಸೆರ್ಕಳ,ಸಯ್ಯಿದ್ ಝೈನುಲ್ ಆಬಿದ್ ಸಅದಿ ಕಿನ್ಯ, ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಅಬ್ದುಲ್ ಲತೀಫ್ ಶಿವಮೊಗ್ಗ, ಅಬ್ದುಲ್ ಮಜೀದ್ ಸಅದಿ ಮುಡಿಪು ,ರಿಯಾಝ್ ಸಅದಿ ಗುರುಪುರ ಹನೀಫ್ ಸಅದಿ ಬದ್ಯಾರ್ ಹಾಗೂ ದ ಕ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡಬಿದ್ರೆ,ಮಂಗಳೂರು ತಾಲೂಕಿನ ಪ್ರತಿನಿಧಿಗಳು ಭಾಗವಹಿಸಿದ್ದರು.
ಜಿಲ್ಲಾ ಸಅದೀಸ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಉರುಮಣೆ ಸ್ವಾಗತಿಸಿ ಅಬ್ಬಾಸ್ ಸಅದಿ ಕಟ್ಟತ್ತಿಲ ವಂದಿಸಿದರ.