ಕಾಪು: ಎಸ್ಸೆಸ್ಸೆಫ್ ರಾಜ್ಯ ಸಮಿತಿ ನಿರ್ದೇಶನ ಪ್ರಕಾರ ಉಡುಪಿ ಜಿಲ್ಲೆಯ ಕಾಪು, ಉಡುಪಿ, ಕಾರ್ಕಳ ಡಿವಿಷನ್’ಗಳ Q-team ಸದಸ್ಯರ ಉಧ್ಘಾಟನಾ ತರಬೇತಿ ಶಿಬಿರ ಕಾಪು ಜೆ.ಸಿ.ಐ ಭವನದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಅಧ್ಯಕ್ಷತೆಯಲ್ಲಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಪಿ.ಎಂ. ಅಶ್ರಫ್ ರಝಾ ಅಂಜದಿ ಉಡುಪಿ ಉಧ್ಘಾಟಿಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ Q-team
ಗುರಿ, ಹಾಗೂ ಉದ್ದೇಶದ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುಹಿಯ್ಯದ್ದೀನ್ ಸಖಾಫಿ ಪೈಯ್ಯಾರು, ಜಿಲ್ಲಾ ನಾಯಕರಾದ ಸಲೀಂ ಪಕೀರ್ಣಕಟ್ಟೆ, ಮುಹಮ್ಮದ್ ಶಮೀರ್ ಕೋಡಿ, ಕ್ಯೂ ಟೀಂ ಕಾಪು ಡಿವಿಷನ್ ಉಸ್ತುವಾರಿ ಸಿರಾಜ್ ಎಂ.ಎಸ್. ಕನ್ನಂಗಾರ್, ಉಡುಪಿ ಡಿವಿಷನ್ ಉಸ್ತುವಾರಿ ಶಮೀರ್ ಮಿಸ್ಬಾಹಿ ಪಡುಬಿದ್ರಿ ಉಪಸ್ಥಿತರಿದ್ದರು.
ಕಾಪು ಡಿವಿಷನ್ ಅಧ್ಯಕ್ಷ ಶಾಹುಲ್ ಹಮೀದ್ ನಈಮಿ ಉಚ್ಚಿಲ ಸಭೆಯನ್ನು ಸ್ವಾಗತಿಸಿದರು.
ಜಿಲ್ಲಾ ಕಾರ್ಯದರ್ಶಿ ನಾಸಿರ್ ಭದ್ರಗಿರಿ ಧನ್ಯವಾದ ಸಲ್ಲಿಸಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು ಕಾರ್ಯಕ್ರಮ ನಿರೂಪಿಸಿದರು.
ವರದಿ : ಪಿ ಎಂ ಎಸ್ ಪಡುಬಿದ್ರಿ