janadhvani

Kannada Online News Paper

ಹಿಟ್ಲರ್ ಇನ್ನೂ ಬದುಕಿರುವನೇ?- ಮೋದಿ ವಿರುದ್ಧ ಅಮೆರಿಕಾದಲ್ಲಿ ಭಾರೀ ಪ್ರತಿಭಟನೆ

ಹೌಸ್ಟನ್: ಪ್ರಧಾನಿ ನರೇಂದ್ರ ಮೋದಿಯವರ ‘ಹೌಡಿ ಮೋದಿ’ ಕಾರ್ಯಕ್ರಮದ ಬಗ್ಗೆ ಬಣ್ಣ ಬಣ್ಣದ ವರದಿಗಳು ಭಾರತೀಯ ಮಾಧ್ಯಮಗಳಲ್ಲಿ ಕಂಡು ಬಂದಿತ್ತು. ಆದರೆ “ರೌಡಿ ಮೋದಿ” ಎಂಬ ತಲೆಬರಹದಲ್ಲಿ ಮೋದಿ ವಿರುದ್ಧ ಪ್ರತಿಭಟನೆ ನಡಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲಿ ಮುಖಭಂಗವಾಗಿರುವ ಸುದ್ದಿ ಭಾರತೀಯ ಮಾಧ್ಯಮಗಳಲ್ಲಿ ಸುದ್ದಿಯಾಗಲೇ ಇಲ್ಲ.

ಹೌದು! ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಕಾಲಿಡುತ್ತಿದ್ದಂತೆಯೇ ಅವರಿಗೆ ಭಾರೀ ಪ್ರತಿಭಟನೆ ಎದುರಾಗಿದೆ. ವಿದೇಶಿ ನೆಲದಲ್ಲಿ ಒಂದೆಡೆ ಪ್ರಧಾನಿ ಮೋದಿ ಮಿರಮಿರ ಮಿಂಚುತ್ತಿದ್ದರೆ, ಇನ್ನೊಂದು ಕಡೆಯಿಂದ ಪ್ರತಿಭಟನೆಯ ಕಾವು ಏರಿತ್ತು. ಮೋದಿ ಹ್ಯೂಸ್ಟನ್ ನಿಂದ ವಾಪಸ್ ಹೋಗುವಂತೆ ಪ್ರತಿಭಟನಾಕಾರರು ಹಲವು ಹ್ಯಾಶ್ ಟ್ಯಾಗ್ ಗಳನ್ನು ಬಳಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನರಮೇಧ, ಗುಂಪು ಹತ್ಯೆಯ ಆರೋಪವನ್ನು ಪ್ರತಿಭಟನಾಕಾರರು ಹೊರಿಸಿದ್ದಾರೆ. ನಿಜವಾದ ಹಿಂದುಗಳು ಗುಂಪು ಹತ್ಯೆ ನಡೆಸುವುದಿಲ್ಲ, ಹಿಂದೂ ಧರ್ಮ ಸತ್ಯ, ಹಿಂದುತ್ವ ಸುಳ್ಳು ಎನ್ನುವ ಇತ್ಯಾದಿ ಪೋಸ್ಟರ್ ಗಳನ್ನು ಹಿಡಿದುಕೊಂಡು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಎಲ್ಲ ವರದಿಗಳು ಅಮೆರಿಕದ ಸುದ್ದಿವಾಹಿನಿಗಳಲ್ಲಿ ರಾರಾಜಿಸಿರುವುದೂ ಅಷ್ಟೇ ಸತ್ಯ.

ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ. ಜೊತೆಗೆ ಅರ್ಧ ಹಿಟ್ಲರ್, ಅರ್ಧ ಮೋದಿಯ ಭಾವಚಿತ್ರದ ಬ್ಯಾನರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ, ಬಿಜೆಪಿ ಮಾತೃ ಸಂಘಟನೆ ಆರೆಸ್ಸೆಸ್ ನ್ನು ಕು ಕ್ಲುಕ್ಸ್ ಖಾನ್ ಖಾನ್ ಗೆ ಹೋಲಿಸಿ ಘೋಷಣೆ ಕೂಗಿದ್ದಾರೆಂದು ವರದಿಯಾಗಿದೆ. ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಪೈಕಿ ಹಿಂದೂ, ಸಿಖ್ಖ್, ಮುಸ್ಲಿಮರು, ಕ್ರೈಸ್ತರೂ ಸೇರಿದ್ದರು ಎಂದು ವಿದೇಶಿ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

error: Content is protected !! Not allowed copy content from janadhvani.com