ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಕುಂದಾಪುರ ಡಿವಿಷನ್ ಇದರ Q team ಕಾರ್ಯಕರ್ತರ ಸಮ್ಮಿಲನ ZACVIK ಕಾರ್ಯಕ್ರಮ 22/09/2019 ಆದಿತ್ಯವಾರದಂದು ಕುಂದಾಪುರ ಡಿವಿಷನ್ ಅಧ್ಯಕ್ಷರಾದ ಸಿದ್ದೀಖ್ ಸಖಾಫಿ ಇವರ ಅಧ್ಯಕ್ಷತೆಯಲ್ಲಿ ಹಿದಾಯತುಲ್ ಇಸ್ಲಾಂ ಮದರಸ ಮೂಡುಗೋಪಾಡಿ ಸಭಾಂಗಣದಲ್ಲಿ ನಡೆಯಿತು.
ಮೂಡುಗೋಪಾಡಿ ಜುಮುಅಃ ಮಸ್ಜಿದ್ ಖತೀಬರಾದ ಅಬೂಬಕರ್ ಸಅದಿ ವಿಟ್ಲ ಇವರ ದುಆದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಕರ್ನಾಟಕ ರಾಜ್ಯ ಸಮಿತಿಯ ಕೋಶಾಧಿಕಾರಿಯಾದ ಅಬ್ದುರ್ರವೂಫ್ ಮೂಡುಗೋಪಾಡಿ ಉಧ್ಘಾಟಿಸಿದರು.
ಕಾರ್ಯಕ್ರಮದಲ್ಲಿ Q team ಸನ್ನದ್ಧ ಪಡೆಯ ಉದ್ದೇಶ, ಗುರಿ ಕುರಿತು ರಾಜ್ಯ ಸಮಿತಿ ಉಪಾಧ್ಯಕ್ಷರಾದ ಹಾಫಿಝ್ ಸುಫ್ಯಾನ್ ಸಖಾಫಿ ಸವಿಸ್ತಾರವಾಗಿ ತರಗತಿ ನಡೆಸಿದರು. ನಂತರ ಕರ್ನಾಟಕ SYS ರಾಜ್ಯಾಧ್ಯಕ್ಷರಾದ ಜಿ.ಎಂ. ಕಾಮಿಲ್ ಸಖಾಫಿಯವರು ಸಂಘಟನಾ ತರಗತಿ ನಡೆಸಿದರು. ssf ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಹಾಗೂ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರಳಯದಿಂದ ತತ್ತರಿಸಿದ ನೆರೆ ಪೀಡಿತ ಪ್ರದೇಶಗಳಿಗೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಅಗತ್ಯವಸ್ತುಗಳನ್ನು ಒದಗಿಸಿಕೊಟ್ಟ ಹಾಪಿಝ್ ಸುಫ್ಯಾನ್ ಸಖಾಫಿ, ಹಾಗೂ ಅಬ್ದುರ್ರವೂಫ್ ಖಾನ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಜಿ.ಎಂ.ಉಸ್ತಾದರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ನಾಯಕರಾದ ಅಶ್ರಫ್ ಮುಸ್ಲಿಯಾರ್ ಹಂಗಳೂರು, ಕುಂದಾಪುರ ಡಿವಿಷನ್ ಉಸ್ತುವಾರಿಯಾದ ಇಬ್ರಾಹಿಂ ಮಜೂರು, ಉಡುಪಿ ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ, ಕೋಡಿ ಸೆಕ್ಟರ್ ಅಧ್ಯಕ್ಷರಾದ ಇಸ್ಮಾಈಲ್ ಸಖಾಫಿ, ಹಾಗೂ ಹಲವು Q team ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾ ನಾಯಕರಾದ ಸಿದ್ದೀಖ್ ಸಅದಿ ಮೂಡುಗೋಪಾಡಿ ಸ್ವಾಗತಿಸಿ ಕೊನೆಯಲ್ಲಿ ಡಿವಿಷನ್ ಪ್ರ.ಕಾರ್ಯದರ್ಶಿ ನಿಝಾಂ ಪಡುಕರೆ ವಂಧಿಸಿದರು.