ಪುತ್ತೂರು : ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸಕ್ರೀಯ ಕಾರ್ಯಕರ್ತರ ತಂಡ ಕ್ಯೂ
ಇದರ ಝೋನಲ್ ಮಟ್ಟದ ಝಾಕ್ವಿಕ್ ಕಾರ್ಯಕ್ರಮ ದ.ಕ ಈಸ್ಟ್ ಝೋನ್ ವತಿಯಿಂದ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು.
ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಲರಿ ಕಾವಳಕಟ್ಟೆ ಅಧ್ಯಕ್ಷತೆ ವಹಿಸಿದರು.
ಎಸ್ಸೆಸ್ಸೆಫ್ ದಕ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ಸಭೆಯನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಸದಸ್ಯ ನೌಫಲ್ ಸಖಾಫಿ ಕಳಸ ವಿಷಯ ಮಂಡನೆ ಮಾಡಿದರು.
ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಅಡ್ವಕೇಟ್ ಶಾಕಿರ್ ಹಾಜಿ, ಎಸ್ ಎಂ ಬಶೀರ್ ಹಾಜಿ ಶೇಖಮಲೆ, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯಾ ಸಾಜ, ಖಾಸಿಂ ಹಾಜಿ ಮಿತ್ತೂರು, ಅಶ್ರಫ್ ಸಅದಿ ಅಡ್ಕ, ಮುಹಮ್ಮದ್ ಶರೀಫ್ ತ್ವೈಬಾ, ಅಬ್ದುಲ್ ನಾಸಿರ್ ಕೋಲ್ಪೆ, ಶರೀಫ್ ನಂದಾವರ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಸ್ವಾಗತಿಸಿ,ಕೊನೆಗೆ ವಂದಿಸಿದರು.