ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪೆರಿಯಪಾದೆ ಬ್ರಾಂಚ್ ಮಹಾಸಭೆ ಇಂದು ಪೆರಿಯಪಾದೆಯಲ್ಲಿ ನಡೆಯಿತು. ಎಸ್.ವೈ.ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಶ್ರಫ್ ಮದನಿ ಬಂಟ್ವಾಳ ಉದ್ಘಾಟಿಸಿ ವಿಷಯ ಮಂಡಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಎಸ್.ಆರ್.ಟಿ.ಸಿ ವೀಕ್ಷಕರಾಗಿ ಆಗಮಿಸಿ ಚುನಾವಣಾ ತರಗತಿ ನಡೆಸಿದರು.ನಂತರ ಹೊಸ ಸಮಿತಿಗೆ ರೂಪುಗೊಡಲಾಯಿತು. ಅಧ್ಯಕ್ಷರಾಗಿ ಆದಂ ಗಣಪಲಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಆದಂ ಗೇಣಿ, ಕೋಶಾಧಿಕಾರಿಯಾಗಿ ಇಬ್ರಾಹಿಮ್ ಗಣಪಳಿಕೆ ಹಾಗೂ ಹನ್ನೊಂದು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಹಾರಿಸ್ ಪೆರಿಯಪಾದೆ ಸ್ವಾಗತಿಸಿ, ಝಮೀರ್ ಪೆರಿಯಪಾದೆ ವಂದಿಸಿದರು.