janadhvani

Kannada Online News Paper

KCF ಅಲ್ ಖಸೀಮ್ ಸ್ನೇಹ ಸಂಗಮ ಹಾಗೂ HVC ಸ್ವಯಂ ಸೇವಕರಿಗೆ ಅಬಿನಂದನಾ ಸಮಾರಂಭ

ಅಲ್ಲಾಹುವಿನ ಅತಿಥಿಗಳಾಗಿ ಆಗಮಿಸಿದ ಹಜ್ಜಾಜುಗಳ ಸೇವೆಗೈದು ಮರಳಿಬಂದತಹ ”ಹಜ್ಜ್ ವಾಲಿಂಟಿಯರ್ ಕೋರ್ “ನ ಸ್ವಯO ಸೇವಕರುಗಳಿಗೆ ಅಬಿನಂಧನಾ ಕಾರ್ಯಕ್ರಮ ಹಾಗೂ ಕೆ.ಸಿ.ಎಫ್ ಸದಸ್ಯರುಗಳ ಸ್ನೇಹ ಸಂಗಮ ಕಾರ್ಯ ಕ್ರಮ ಅತಿ ವಿಜ್ರOಭಣೆಯಿಂದ ನಡೆಯಿತು.

ಬುರೈದ ಅಲ್ ನಖಿಲ್ ರೆಸಾರ್ಟ್ ನಲ್ಲಿ ನಡೆದ ಕಾಯ೯ಕ್ರಮವು *ಅಬ್ದುಲ್ಲ ಮದನಿ ಉಸ್ತಾದ* ರ ದುವಾದೊಂದಿಗೆ ಪ್ರಾರಂಭಗೊಂಡಿತು KCF ಅಲ್ ಖಸೀಮ್ ಝೋನ್ ಅಧ್ಯಕ್ಷರಾದ ಅಬ್ದುಲ್ ಖಯ್ಯೂO ಉಸ್ತಾದ್* ಜಾಲ್ಸೂರುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮವನ್ನು ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಪ್ರದಾನ ಕಾರ್ಯದರ್ಶಿ ಜನಾಬ್ ಸಾಲಿ ಬೆಳ್ಳಾರೆ ಉದ್ಘಾಟಿಸಿದರು.

HVCಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಹಾಗೂ ಅಬಿನಂದನಾ ಪಲಕ ನೀಡಿ ಸನ್ಮಾನಿಸಲಾಯಿತು, ಕಳೆದ ನಾಲ್ಕು ವರ್ಷಗಳಿಂದ ಹಾಜಿಗಳ ಸೇವೆಗೈಯುವ ಸೇವಕನೋರ್ವನಿಗೆ ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಕೊಡಮಾಡಿದ ವಿಶೇಷ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಅಬ್ದುಲ್ ಜಬ್ಬಾರ್ ಹರೇಕಳ ರವರಿಗಿ ನೀಡಿ ಗೌರವಿಸಲಾಯಿತು ಮುಖ್ಯ ಅತಿಥಿಗಳಾದ ಮುಸ್ತಫಾ ಸಅದಿ ಉಸ್ತಾದರು ಮುಖ್ಯ ಪ್ರಬಾಷಣಗೈದರು.

ICF ಮಾಜಿ ಚೆಯರ್ಮಾನ್ ಹಸನ್ ಉಸ್ತಾದ್ ಹಾಗೂ RSC ಅಲ್ ಖಸೀಮ್ ಸೆಂಟ್ರಲ್ ಕಮಿಟಿ ಚೇಯರ್ಮ್ಯಾನ್ ಹಂಝ ಹಸನಿ* ಉಸ್ತಾದರುಗಳು ಆಶಂಸಾ ಬಾಷಣದ ಮೂಲಕ ಗಮನ ಸೆಳೆದರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಶೇರಿ ಉಪಸ್ಥಿತರಿದ್ದರು.

ಹಜ್ಜ್ ಸೇವಕ ತ೦ಡದ ಸದಸ್ಯರುಗಳಾದ ಅಬ್ದುಲ್ ಕರೀಂ ಇಮ್ದಾದಿ , ಮುಸ್ತಫಾ ಹಾಸನ ಹಾಗೂ ಬಶೀರ್ ಕನ್ಯಾನರವರು ತಮ್ಮ ಹಜ್ಜ್ ಸೇವೆಯ ಅನುಭವಗಳನ್ನು ವಿವರಿಸಿ ಸಭೀಕರನ್ನು ಆವೇಶ ಗೊಳಿಸಿದರು.

ಅಬ್ದುಲ್ ಖಯ್ಯೂO ಜಾಲ್ಸೂರು ಹಾಗೂ ದಾವೂದ್ ಕಣ್ಣಂಗಾರ್ ರವರು ನೆಬಿ ಮದ್ಹ್ ಹಾಡು ಹಾಗೂ ಬೈತ್ ಗಳ ಮೂಲಕ ಹುರಿದುಂಬಿಸಿದರು.

ಅಲ್ ಖಸೀಮ್ ಝೋನ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಕಣ್ಣಂಗಾರ್ ಸ್ವಾಗತಿಸಿ , ಬಶೀರ್ ಕನ್ಯಾನ ವಂದಿಸಿದರು.

ಆಟೋಟ ಸ್ಪರ್ದೆಗಳ ಮೂಲಕ ಸ್ನೇಹ ಸಂಗಮ ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

error: Content is protected !! Not allowed copy content from janadhvani.com