janadhvani

Kannada Online News Paper

ರಾಜಕಾರಣಿಗಳೇ ಸಮುದಾಯದ ಒಗ್ಗಟ್ಟಿಗೆ ತೊಡಕಾಗದಿರಿ- ಮೌಲಾನ ಶಾಫಿ ಸಅದಿ

ದಾವಣಗೆರೆ. ಸೆ,22: ಕೆಲವು ರಾಜಕಾರಣಿಗಳು ಸಮುದಾಯದ ಒಗ್ಗಟ್ಟಿಗೆ ತೊಡಕಾಗುತ್ತಿದ್ದು, ಪಕ್ಷ ನಿಷ್ಠೆಯ ಹೆಸರಿನಲ್ಲಿ ಸಮುದಾಯದ ಒಗ್ಗಟ್ಟಿಗೆ ಮಾರಕಾವಾಗುತ್ತಿರುವ ಕೆಲವು ಬೆಳವಣಿಗೆಗಳು ರಾಜ್ಯದ ವಿವಿಧ ಕಡೆಗಳಲ್ಲಿ ಇತ್ತೀಚೆಗೆ ಕಂಡು ಬರುತ್ತಿದೆ ಇದು ಖೇದಕರ ಮತ್ತು ಖಂಡನೀಯವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ ಯವರು ಹೇಳಿದರು.

ಅವರು ಕರ್ನಾಟಕ ಮುಸ್ಲಿಂ ಜಮಾಅತ್ ದಾವಣಗೆರೆ ಜಿಲ್ಲಾ ಸಮಿತಿ ರಚನೆ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ನಡೆಸಿ ಮಾತನಾಡಿದರು. ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮುಸ್ಲಿಂ ನಾಯಕರು ಸಮುದಾಯದ ವಿಚಾರ ಬಂದಾಗ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದರು.

ಕರ್ನಾಟಕ ಮುಸ್ಲಿಂ ಜಮಾಅತ್ ದಾವಣಗೆರೆ ಜಿಲ್ಲಾ ಸಮಿತಿ ರಚನೆಯು ಇಂದು ನಗರದ ರಾಜಮಹಲ್ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಉಪಾಧ್ಯಕ್ಷರು ಅಬೂಸುಫಿಯಾನ್ ಮದನಿ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಯೋಜನಾ ಸಮಿತಿ ಅಧ್ಯಕ್ಷರಾದ ಹಮೀದ್ ಬಜ್ಪೆ ಕರ್ನಾಟಕ ಮುಸ್ಲಿಂ ಜಮಾತ್  ನ ಯೋಜನೆಯನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಸೈಪುಲ್ಲಾ ಸಾಬ್, ಚಮ್ಮಾನ್ ಸಾಬ್ ಕಾರ್ಯದರ್ಶಿ ಯಕುಬ್ ಯೂಸುಫ್ ಹೊಸ ನಗರ, ನಾಯಕರಾದ ಅಶ್ರಫ್ ಕಿನಾರ ಮಂಗಳೂರು, ಫಾರೂಕ್ ಪಾಷ ಬೆಂಗಳೂರು, SSF ನಾಯಕರಾದ ಕೆ ಕೆ ಸಖಾಫಿ , ಜುನೈದ್ ಸಖಾಫಿ ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾತ್ ದಾವಣಗೆರೆ ಜಿಲ್ಲಾ ನೂತನ ಜಿಲ್ಲಾ ಸಮಿತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಘೋಷಿಸಿದರು.

ಅಧ್ಯಕ್ಷರಾಗಿ ಜೆ ಅಮಾನುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ಸಯೀದ್ ಚಾರ್ಲಿ, ಹಾಗು ಕೋಶಾಧಿಕಾರಿಯಾಗಿ ಹಕ್ಕಾನಿ ಅತಾವುಲ್ಲಾ ಸಾಬ್ ಅವರನ್ನು ಹಾಗೂ ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.

error: Content is protected !! Not allowed copy content from janadhvani.com