ಉಡುಪಿ : ರಾಜ್ಯ ಎಸ್ಸೆಸ್ಸೆಫ್ಫಿನ ಸಕ್ರೀಯ ಕಾರ್ಯಕರ್ತರ ತಂಡ Qteam ಇದರ ಉಡುಪಿ ಜಿಲ್ಲಾ ಮಟ್ಟದ ZAKVIC ಕಾರ್ಯಕ್ರಮ ಕುಂದಾಪುರದ ಮೂಡುಗೋಪಾಡಿಯಲ್ಲಿ ಹಾಗೂ ಕಾಪು ಲಯನ್ಸ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಕುಂದಾಪುರ, ಉಡುಪಿ, ಕಾರ್ಕಳ ಹಾಗೂ ಕಾಪು ಡಿವಿಷನ್ ಕ್ಯು ಟೀಂ ಕಾರ್ಯಕರ್ತರು ಭಾಗವಹಿಸಿದರು. ಎಸ್ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ ಕಾಮಿಲ್ ಸಖಾಫಿ ವಿಷಯ ಮಂಡನೆ ನಡೆಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಕ್ಯು ಟೀಂ ಮೂಲಕ ರಾಜ್ಯದಾದ್ಯಂತ ಎಸ್ಸೆಸ್ಸೆಫ್ ನಡೆಸಲಿರುವ ಶೈಕ್ಷಣಿಕ ಸಾಮಾಜಿಕ ಜಾಗೃತಿಯ ಹಾಗೂ ಸಕ್ರೀಯ ತಂಡದ ಧ್ಯೇಯೋದ್ದೇಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಅಮ್ಜದಿ, ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಹಾಗೂ ಇನ್ನಿತರ ಜಿಲ್ಲಾ ಹಾಗೂ ಡಿವಿಷನ್ ನಾಯಕರು ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೂರು ಸ್ವಾಗತಿಸಿ ವಂದಿಸಿದರು.