ಪುತ್ತೂರು,ಸೆ. 21:ಸುನ್ನೀ ಜಂ-ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಇದರ ವಾರ್ಷಿಕ ಮಹಾಸಭೆ ತಾಲೂಕು ಅಧ್ಯಕ್ಷ ಅಬ್ದುಸ್ಸತ್ತಾರ್ ಸಖಾಫಿ ಪುತ್ತೂರು ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಂ-ಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಫೈಝಿ ಸಂಪ್ಯ ಉದ್ಘಾಟಿಸಿದರು.ರಾಜ್ಯ ಉಪಾಧ್ಯಕ್ಷ ಅಲ್ ಹಾಜಿ ಮುಹಮ್ಮದ್ ಸಅದಿ ವಳವೂರು ತರಗತಿ ನಡೆಸಿದರು.ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು.ಸತ್ತಾರ್ ಸಖಾಫಿ ಕೂರ್ನಡ್ಕ, ಪ್ರ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಕೋಶಾಧಿಕಾರಿ ಸ್ವಲಾವುದ್ದೀನ್ ಸಖಾಫಿ ಮಾಡನ್ನೂರು, ಉಪಾಧ್ಯಕ್ಷರು ಶಾಫಿ ಸಖಾಫಿ ಕೊಕ್ಕಡ, ಬಹು ಹಂಝಾ ಮುಸ್ಲಿಯಾರ್ ವಳಾಲ್, ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಸಖಾಫಿ ಪುತ್ತೂರು, ಬಹು ಬದ್ರುದ್ದೀನ್ ಅಹ್ಸನಿ ನೀರಕಟ್ಟೆ.
ಸದಸ್ಯರುಗಳಾಗಿ ಅಬುಲ್ ಬುಶ್ರಾ ಉಸ್ತಾದ್ ಸಂಪ್ಯ, ಮುಹಮ್ಮದ್ ಅಲಿ ಫೈಝಿ ಸಂಪ್ಯ, ಹಾಫಿಳ್ ನಿಝಾಮಿ ಚೆನ್ನಾರು, ಅಬ್ಬಾಸ್ ಮದನಿ ರೆಂಜ, ಅಬೂ ಶಝ ಕೂರ್ನಡ್ಕ, ಸುಲೈಮಾನ್ ಸಅದಿ ಕೂರ್ನಡ್ಕ, ಅಬ್ದುರ್ರಝಾಖ್ ಲತೀಫಿ ಕುಂತೂರು, ಬಶೀರ್ ಮದನಿ ಕೆಮ್ಮಾರ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ ರವನ್ನು ಆಯ್ಕೆಮಾಡಲಾಯಿತು.
ನಿಕಟಪೂರ್ವ ಕಾರ್ಯದರ್ಶಿ ಹಾಫಿಲ್ ಅಬ್ದುಲ್ ಸಲಾಂ ಚೆನ್ನಾರ್ ಸ್ವಾಗತಿಸಿ ಅಬ್ದುಲ್ ಜಲೀಲ್ ಸಖಾಫಿ ವಂದಿಸಿದರು.