ಬದ್ಯಾರ್, ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್
(ಎಸ್.ಎಸ್.ಎಫ್) ಇದರ ಧ್ವಜ ದಿನಾಚರಣೆಯ ಪ್ರಯುಕ್ತ ಎಸ್.ಎಸ್.ಎಫ್ ಬದ್ಯಾರ್ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಬದ್ರಿಯಾ ಜುಮ್ಮಾ ಮಸೀದಿ ಬದ್ಯಾರ್ ಇದರ ಆವರಣದಲ್ಲಿ ಜಮಾ’ಅತ್ ಅದ್ಯಕ್ಷರಾದ ಜನಾಬ್/ ಅಬೂಬಕರ್ ರವರ ನೇತೃತ್ವದಲ್ಲಿ ನಡೆಯಿತು.
ದುವಾ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದ ಸ್ಥಳೀಯ ಖತೀಬರಾದ ಅನ್ಸಾರ್ ಸಖಾಫಿ ಮುಕ್ವೆ ಉಸ್ತಾದರು ಮಾತನಾಡುತ್ತಾ,ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಎಸ್.ಎಸ್.ಎಫ್ ಸಂಘಟನೆಯು ನಡೆಸಿದ ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ವಿವರಿಸಿ, ಇಸ್ಲಾಮಿನ ಸಾಂಪ್ರದಾಯಿಕ ಮೌಲ್ಯವನ್ನು ಎತ್ತಿ ಹಿಡಿಯಲು ಯುವ ಸಮೂಹವು ಎಸ್‌ಎಸ್ ಎಫ್ ಜೊತೆ ಕೈ ಜೋಡಿಸಬೇಕೆಂದು ಕರೆನೀಡಿದರು.
ಬದ್ಯಾರ್ ಸಿರಾಜುಲ್ ಇಸ್ಲಾಂ ಮದರಸದ ಮುಅಲ್ಲಿಮರಾದ ಅಬ್ದುಲ್ ರಶೀದ್ ಮದನಿ ನಾಳ ಹಾಗೂ ಹಮೀದ್ ಮುಸ್ಲಿಯಾರ್ ನಾಳ, ಜಮಾ’ಅತ್ ಕೋಶಾಧಿಕಾರಿ ಕಾಸಿಂ ಎಂಗೋಡಿ , ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಬದ್ಯಾರ್, SYS ಬದ್ಯಾರ್ ಶಾಖೆಯ ಅದ್ಯಕ್ಷರಾದ HR ಹೈದರ್ ಮುಸ್ಲಿಯಾರ್ , SSF ಬದ್ಯಾರ್ ಶಾಖೆಯ ಅದ್ಯಕ್ಷರಾದ ನಾಸಿರ್ ಬರಾಯ, ಕೋಶಾಧಿಕಾರಿ ಮುಹಮ್ಮದ್ ಬರಾಯ ಸಹಿತ SSF, SYS ನ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜಮಾಅತ್ ಪ್ರಧಾನ ಕಾರ್ಯದರ್ಶಿ BH ಅಬ್ಬಾಸ್ ಬರಾಯ ಸ್ವಾಗತಿಸಿದರು. ಎಸ್ಎಸ್ಎಫ್ ಬದ್ಯಾರ್ ಶಾಖೆಯ ಕಾರ್ಯದರ್ಶಿ ಇರ್ಶಾದ್ ಪೊಟ್ಟುಕೆರೆ ಧನ್ಯವಾದಗೈದರು. ಕೊನೆಯಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು.
📝ವರದಿ:
ಆಸಿಫ್ ಬದ್ಯಾರ್