ಗಲ್ಫ್ ಇಶಾರ ಕೇವಲ ಒಂದು ಸಮುದಾಯದ ಪಾಕ್ಷಿಕವಾಗಿ ಮಾತ್ರ ಇಲ್ಲಿ ಬೆಳೆಯಲಿಲ್ಲ. ಸಹಸ್ರಾರು ಕನ್ನಡಿಗರ ಅಭಿಮಾನವಾಗಿ ವರ್ತಮಾನ ಜಗತ್ತಿನ ಆಗುಹೋಗುಗಳ ಕುರಿತು ಬೆಳಕು ಚೆಲ್ಲಿ ಓದುಗರ ಅಂತರಾಳದಲ್ಲಿ ಹೊಸ ಭರವಸೆಯನ್ನು ಬೆಳಗಿಸಿದ ಪತ್ರಿಕೆ ಯಾಗಿದೆ ಗಲ್ಫ್ ಇಶಾರ.
ಇಂದಿನ ಆಧುನಿಕ ಯುಗದ ಜನರ ಬಾಳಲ್ಲಿ ವಿದ್ಯಾರ್ಜನೆಯ ಮಹತ್ವ, ಯುವತ್ವದ ಮೌಲ್ಯ, ನೈತಿಕತೆಯ ಪಾಠ, ಧಾರ್ಮಿಕ ಪ್ರಜ್ಞೆಯನ್ನು ಮನವರಿಕೆ ಮಾಡಿಸಿಕೊಡುವಂತಹ ಪ್ರಯತ್ನಗಳಲ್ಲಿ ಇಶಾರ ಯಶಸ್ವಿಯಾಗಿದೆ.
ಗಲ್ಫ್ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ರಾಂತಿಯ ಅಲೆಗಳನ್ನೆಬ್ಬಿಸಿ ಸದೃಢ ಯುವ ಪಡೆಯೊಂದನ್ನು ಸೃಷ್ಟಿಸಿ ಮುನ್ನೇರುತ್ತಿರುವ ಕೆಸಿಎಫ್ ಸಂಘಟನೆಯ ಮುಖವಾಣಿಯಾಗಿ ಗುರುತಿಸುತ್ತಿರುವ ಅಚ್ಚ ಕನ್ನಡದ ಸ್ವಚ್ಛಂದ ಪತ್ರಿಕೆ, ಅರಿವಿನ ಚಿತ್ತಾರ ಗಲ್ಫ್ ಇಶಾರ ಚಂದಾ ಅಭಿಯಾನವು
ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಮಾಝಿನ್ (ರ) ರವರ ಸನ್ನಿಧಿಯಲ್ಲಿ ಅಧಿಕೃತ ವಾಗಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ರವರ ಅದ್ಯಕ್ಷತೆಯಲ್ಲಿ ಜರುಗಿತು. ಪ್ರಕಾಶನ ವಿಭಾಗದ ಅಧ್ಯಕ್ಷರಾದ ಶಮೀರ್ ಉಸ್ತಾದ್ ಹೂಡೆ ರವರು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ರವರನ್ನು ಪ್ರಥಮ ಚಂದಾದಾರರನ್ನಾಗಿಸುವ ಮೂಲಕ ಕೆಸಿಎಫ್ ಒಮಾನ್ ಇಶಾರ ಅಭಿಯಾನ ಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರ್, ಕೆಸಿಎಫ್ ಒಮಾನ್ ಸಂಘಟನಾದ್ಯಕ್ಷ ಸಯ್ಯಿದ್ ಆಬಿದ್ ತಂಙಳ್ ಅಲ್ ಹೈದ್ರೊಸಿ, ಇಹ್ಸಾನ್ ವಿಭಾಗದ ಅದ್ಯಕ್ಷರಾದ ಹಂಝ ಹಾಜಿ ಕನ್ನಂಗಾರ್, ಕೋಶಾಧಿಕಾರಿ ಆರಿಫ್ ಕೋಡಿ, ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಹಾಜಿ ಸುಳ್ಯ, ಶಿಕ್ಷಣ ವಿಭಾಗದ ಅದ್ಯಕ್ಷ ಉಬೈದುಲ್ಲಾಹ್ ಸಖಾಫಿ, ರಾಷ್ಟ್ರೀಯ ನಾಯಕರುಗಳಾದ ಹನೀಫ್ ಸಅದಿ, ಝುಬೈರ್ ಸಅದಿ ಪಾಟ್ರಕೋಡಿ, ಸಂಶುದ್ದೀನ್ ಪಾಲ್ತಡ್ಕ, ಹಾಗೂ ರಾಷ್ಟ್ರೀಯ ಸಮಿತಿಯ ಸದಸ್ಯರು ಹಾಗೂ ಝೋನ್ ನಾಯಕರುಗಳು ಪಾಲ್ಗೊಂಡಿದ್ದರು.
ಗಲ್ಫ್ ಇಶಾರ ಚಂದಾದಾರರ ಅಭಿಯಾನವು ಇದೇ ಸಪ್ಟೆಂಬರ್ 20 ರಿಂದ ಅಕ್ಟೋಬರ್ 20 ರ ತನಕ ಒಮಾನಿನದ್ಯಾಂತ ನೆಡೆಯಲಿದೆ.