janadhvani

Kannada Online News Paper

SSF ಮಾಚಾರು ಶಾಖೆಯ ವತಿಯಿಂದ ಧ್ವಜ ದಿನ ಆಚರಣೆ

1973 ಎಪ್ರಿಲ್ 29 ಎಸ್ಸೆಸ್ಸೆಫ್ ಕೇರಳ ಮಣ್ಣಲ್ಲಿ ಜನ್ಮ ತಾಳಿದ ದಿನ ಅಂದರೆ SSF ಸ್ಥಾಪನಾ ದಿನ. ರಾಷ್ಟ್ರ ಮಟ್ಟದಲ್ಲಿ ಗೋಲ್ಡನ್ ಜುಬಿಲಿ ಆಚರಿಸುವ ಹೊಸ್ತಿಲಲ್ಲಿದೆ.1989 ಸೆಪ್ಟಂಬರ್ 19 ರಂದು ರೂಪುಗೊಂಡ SSF ಇವತ್ತು ಮಹತ್ತರವಾದ ಹತ್ತಲವಾರು ಸಾಧನೆ‌ಗಳನ್ನು ಮಾಡುವಲ್ಲಿ ಸಫಲವಾಗಿದೆ. ಈ‌ ನಿಟ್ಟಿನಲ್ಲಿ SSF ಮಾಚಾರು ಶಾಖೆಯಲ್ಲಿ ನಡೆದ ದ್ವಜ‌ ದಿನಾಚರಣೆಯನ್ನು ಮಾಚಾರು ಜುಮಾ ಮಸ್ಜಿದ್ ಖತೀಬರಾದಾದ ಅಬ್ಬಾಸ್ ಮದನಿ ಪ್ರಾರ್ಥನೆಯ ಮೂಲಕ ಚಾಲನೆ ಕೊಟ್ಟರು.‌ಈ ಕಾರ್ಯಕ್ರಮದಲ್ಲಿ ಮುಅಲ್ಲಿಂ ಜ’ಅಫರ್ ಸ’ಅದಿ, SSF ಮಾಚಾರು ಶಾಖೆಯ ಅಧ್ಯಕ್ಷ ಅಬ್ದುಸ್ಸಲಾಮ್, ಉಜಿರೆ ಸೆಕ್ಟರ್ ನಾಯಕ ಅನ್ಸಾರ್ ಕಿಲೋಬಝಾರ್ , ಆಡಳಿತ ಸಮಿತಿ ಸದಸ್ಯರಾದ ಝಕರಿಯ ಚೆಕ್ಕೆದಡಿ SSF ಕಾರ್ಯಕರ್ತರಾದ ಹಕೀಂ ಕುದುರು, ಶರೀಫ್ ಅಂಗಡಿ ಅಬ್ದುಲ್ ಸಮದ್, ಹಂಝ ಕನ್ಯಾಡಿ ಉಪಸ್ಥಿತರಿದ್ದರು.