janadhvani

Kannada Online News Paper

ತುಮಕೂರು ಜಿಲ್ಲಾ QTeam ZAKVIC ಕಾರ್ಯಕ್ರಮ ಸಮಾಪ್ತಿ

ತುಮಕೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ರಾಜ್ಯದಾದ್ಯಂತ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕ್ಯು ಟೀಂ ZAKVIC ಕಾರ್ಯಕ್ರಮ ತುಮಕೂರು ಜಿಲ್ಲೆಯ ವತಿಯಿಂದ ತುಮಕೂರು ಯಾಸೀನ್ ಸ್ಕೂಲ್ ನಲ್ಲಿ ಅದ್ದೂರಿಯಾಗಿ ನಡೆಯಿತು.

ಎಸ್ಸೆಸ್ಸೆಫ್ ತುಮಕೂರು ಜಿಲ್ಲಾಧ್ಯಕ್ಷ ಸುಹೈಲ್ ಅಹ್ಮದ್ ಅಧ್ಯಕ್ಷತೆ ವಹಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಆರಿಫ್ ರಝಾ ತುಮಕೂರು ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಕ್ಯು ಟೀಂ ರೂಪುರೇಷೆಗಳು ಹಾಗೂ ಅದರ ಗುರಿಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ಯುಟೀಂ ಕಾರ್ಯಕರ್ತರನ್ನು ಸಂಘಟಿಸಿ ಸಕ್ರೀಯ ಕಾರ್ಯಕರ್ತರ ಒಂದು ಬಲಿಷ್ಠ ತಂಡವನ್ನು ಕಟ್ಟುವ ಬಗ್ಗೆ ಚರ್ಚಿಸಲಾಯಿತು.

ಉನೈಸ್ ಬುಖಾರಿ, ಸಾಬಿತ್ ಇರ್ಫಾನಿ, ಅಬ್ದುಸ್ಸಮದ್, ರೋಷನ್ ಇ‌ಸ್ಮಾಯೀಲ್ ಉಪಸ್ಥಿತರಿದ್ದರು.
ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಫಿಝ್ ಶಾಬಾಝ್ ಅಶ್ರಫಿ ಸ್ವಾಗತಿಸಿ ಕ್ಯು ಟೀಂ ಡಿಸ್ಟ್ರಿಕ್ಟ್ ಡೈರೆಕ್ಟರ್ ಶಮೀರ್ ಹಿಮಮಿ ವಂದಿಸಿದರು.