janadhvani

Kannada Online News Paper

ಎಸ್ ವೈ ಎಸ್ ನೇರಳಕಟ್ಟೆ ಶಾಖೆಗೆ ನೂತನ ನಾಯಕತ್ವ

ನೇರಳಕಟ್ಟೆ : ಸುನ್ನಿ ಯುವಜನ ಸಂಘ ನೇರಳಕಟ್ಟೆ ಇದರ ಮಹಾಸಭೆಯು ದಿನಾಂಕ 08.09.2019 ರಂದು ಮದನಿ ಮಂಝಿಲ್ ನೇರಳಕಟ್ಟೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬ್ರಾಂಚ್ ಅಧ್ಯಕ್ಷರಾದ ಪಿ. ಕೆ. ಅಬ್ಬಾಸ್ ರವರು ವಹಿಸಿದರು. ಹುಸೈನ್ ಮದನಿ ಉಸ್ತಾದರು ದುಆಃ ನೆರೆವೇರಿಸಿದರು.ಅಹ್ಮದ್ ಮದನಿ ಉಸ್ತಾದರು ಸಭೆಯನ್ನು ಉದ್ಘಾಟಿಸಿದರು.

ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ರವರು ವರದಿ ವಾಚಿಸಿದರು. ಕೋಶಾಧಿಕಾರಿ ಖಾಸಿಂ ಹಾಜಿ ಪರ್ಲೋಟುರವರು ಲೆಕ್ಕಪತ್ರಗಳನ್ನು ಮಂಡಿಸಿದರು.

ಎಸ್ ವೈ ಎಸ್ ಮಾಣಿ ಸೆಂಟರ್ ನಿಂದ ಆಗಮಿಸಿದ ಚುನಾವಣಾ ವೀಕ್ಷಕರಾದ ಇಬ್ರಾಹಿಮ್ ಸಅದಿ ಉಸ್ತಾದರು ಮುನ್ನುಡಿ ಭಾಷಣವಿತ್ತು, 19 ಸದಸ್ಯರನ್ನೊಳಗೊಂಡ 2019-21ರ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಿದರು.

ಅಧ್ಯಕ್ಷರಾಗಿ ಮುಹಮ್ಮದ್ ನಾಸೀರ್ ಸಅದಿ ನೆಡ್ಯಾಲ್, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ನೇರಳ, ಕೋಶಾಧಿಕಾರಿಯಾಗಿ ಖಾಸಿಂ ಹಾಜಿ ಪರ್ಲೋಟು, ಉಪಾಧ್ಯಕ್ಷರಾಗಿ ಯೂಸುಫ್ ಕೊಡಾಜೆ, ಶಿಕ್ಷಣ ಮತ್ತು ದಅವಾ ಕಾರ್ಯದರ್ಶಿಯಾಗಿ ಉಮರುಲ್ ಫಾರೂಖ್ ಹನೀಫಿ ಪರ್ಲೋಟು, ವೆಲ್ಫೇರ್ ಮತ್ತು ಹಿಸಾಬಾ ಕಾರ್ಯದರ್ಶಿಯಾಗಿ ಪಿ. ಕೆ. ಅಬ್ಬಾಸ್ ಪರ್ಲೋಟು, ಸದಸ್ಯರಾಗಿ ಅಹ್ಮದ್ ಮದನಿ ಉಸ್ತಾದ್, ಹುಸೈನ್ ಮದನಿ ಉಸ್ತಾದ್, ಇಸ್ಮಾಯಿಲ್ ಮದನಿ ನೇರಳಕಟ್ಟೆ, ಅಬ್ದುಲ್ ಖಾದರ್ ಮದನಿ ನೇರಳಕಟ್ಟೆ, ಆದಂ ಅಮಾನಿ ಅನಂತಾಡಿ, ಅಬ್ದುಲ್ ಹಮೀದ್ ಮದನಿ ಕೊಡಾಜೆ, ಇಸ್ಮಾಯಿಲ್ ಪರ್ಲೋಟು, ಎನ್. ಕೆ. ಖಾಸಿಂ, ಶಾಹುಲ್ ಹಮೀದ್ ಪರ್ಲೋಟು, ಹಸೈನಾರ್ ನೇರಳಕಟ್ಟೆ, ಅಬ್ಬಾಸ್ ಪಂತಡ್ಕ, ಇಸ್ಮಾಯಿಲ್ ಕೊಡಾಜೆ ಹಾಗೂ ಅಬೂಬಕ್ಕರ್ ಕೊಡಾಜೆ, ಸೆಂಟರ್ ಕೌನ್ಸಿಲರುಗಳಾಗಿ ಉಮರುಲ್ ಫಾರೂಖ್ ಹನೀಫಿ ಪರ್ಲೊಟು, ಆದಂ ಅಮಾನಿ ಅನಂತಾಡಿ, ಅಬ್ದುಲ್ ಹಮೀದ್ ಮದನಿ ಕೊಡಾಜೆ, ಎನ್. ಕೆ. ಖಾಸಿಂ, ಶಾಹುಲ್ ಹಮೀದ್ ಪರ್ಲೋಟು, ಇಸ್ಮಾಯಿಲ್ ಪರ್ಲೋಟು, ಹಸೈನಾರ್ ನೇರಳಕಟ್ಟೆ, ಅಬ್ಬಾಸ್ ಪಂತಡ್ಕ, ಇಸ್ಮಾಯಿಲ್ ಕೊಡಾಜೆ ಹಾಗೂ ಅಬೂಬಕ್ಕರ್ ಕೊಡಾಜೆ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವೀಕ್ಷಕರಾದ ಹಬೀಬ್ ಶೇರಾ ಹಾಗೂ ಅಬ್ದುಲ್ ಖಾದರ್ ಶೇರಾ ಉಪಸ್ಥಿತರಿದ್ದರು.ಉಮರುಲ್ ಫಾರೂಖ್ ಹನೀಫಿ ಸ್ವಾಗತಿಸಿ,ನೂತನ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ ಧನ್ಯವಾದಗೈದರು.

🖋 ಯೂಸುಫ್ ಸಯೀದ್ ನೇರಳಕಟ್ಟೆ