janadhvani

Kannada Online News Paper

ನೆರೆ ಸಂತ್ರಸ್ತರಿಗಾಗಿ ಸುಮಾರು 5 ಲಕ್ಷ ರೂ.ವೆಚ್ಚದ ಸಾಮಾಗ್ರಿಗಳೊಂದಿಗೆ SSF ಮೂಡಬಿದ್ರೆ ಡಿವಿಷನ್

ಮೂಡಬಿದ್ರೆ: ಇತ್ತೀಚೆಗೆ ಪ್ರಕೃತಿ ವಿಕೋಪದಿಂದ ತತ್ತರಿಸಿದ ಉತ್ತರ ಕನ್ನಡ ಜಿಲ್ಲೆಯ ಸಂತ್ರಸ್ತ ಜನರಿಗಾಗಿ ವಿವಿಧ ಅಗತ್ಯ ವಸ್ತುಗಳೊಂದಿಗೆ ತೆರಳಿದ SSF ಮೂಡಬಿದ್ರೆ ಡಿವಿಷನ್ ನಾಯಕರಿಗೆ, ಅಲ್ಲಿನ ಜನರ ನೈಜ ಪರಿಸ್ಥಿತಿಯನ್ನರಿಯಲು ಸಾಧ್ಯವಾಯಿತು.

ಊರಿಗೆ ಮರಳಿದ ನಾಯಕರು ವಿವಿಧ ದಾನಿಗಳ ಸಹಾಯ, ಸಹಕಾರದಿಂದ ಶಾಲಾ ಮಕ್ಕಳಿಗೆ ಬೇಕಾಗುವ ಪುಸ್ತಕಗಳು, ಬಟ್ಟೆಗಳು, ಆಹಾರೋತ್ಪನ್ನಗಳೊಂದಿಗೆ ಮೂಡಬಿದ್ರೆ ಡಿವಿಷನ್ SჄS, SSF ನಾಯಕರು ಸೆ.15ರಂದು ಮತ್ತೆ ಉತ್ತರ ಕರ್ನಾಟಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಅವರನ್ನು SჄS ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಹಾಗೂ ಬದ್ರುದ್ದೀನ್ ಅಝ್ ಹರಿ ಬಡಕಬೈಲ್ ಕೈಕಂಬದಲ್ಲಿ ಬೀಳ್ಕೊಟ್ಟರು.