ದುಬೈ: ಯುಎಇ ಕಾನೂನಿನ ಪ್ರಕಾರ ಅಪರಾಧಗಳ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುವುದು ಅಪರಾಧ ಎಂದು ಎಚ್ಚರಿಸಲಾಗಿದೆ. ಅಂತಹ ಚಿತ್ರಗಳು ಮತ್ತು ತುಣುಕುಗಳನ್ನು ಕಾನೂನಿನ ಪ್ರಕಾರವಲ್ಲದೆ ಪ್ರಕಟಿಸಲು ಅಥವಾ ಪ್ರಸಾರ ಮಾಡಬಾರದು ಎಂದು ಯುಎಇ ಅಟಾರ್ನಿ ಜನರಲ್ ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಅಪರಾಧದ ವಿಡಿಯೋ ತುಣುಕುಗಳನ್ನು ವ್ಯಾಪಕವಾಗಿ ಹರಡಲಾದ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಯುಎಇಯ ಅಟಾರ್ನಿ ಜನರಲ್ ಡಾ.ಹಮದ್ ಸೈಫ್ ಅಲ್ ಶಮ್ಸಿ ತಿಳಿಸಿದ್ದಾರೆ. ಒಂದು ಘಟನೆಯನ್ನು ಸಾಮಾಜಿಕ ಒಳಿತಿಗಾಗಿ ವರದಿ ಮಾಡಲು ಚಿತ್ರಿಸಬಹುದು, ಆದರೆ ಕಾನೂನುಬದ್ಧವಾಗದ ಹೊರತು ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು.
ಅಪರಾಧದಲ್ಲಿ ವಾದಿ ಮತ್ತು ಪ್ರತಿವಾದಿಯನ್ನು ಒಳಗೊಂಡ ಹಲವಾರು ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದ್ದು ಗಮನಕ್ಕೆ ಬಂದಿದೆ. ಅವುಗಳನ್ನು ಪ್ರಕಟಿಸುವುದರಿಂದ ಚಿತ್ರಿಸಿದವರು, ಪ್ರಕಾಶಕರು ಮತ್ತು ಪ್ರಸಾರ ಪಡಿಸಿದವರು ಅಪಾಯಕ್ಕೆ ಸಿಲುಕುತ್ತಾರೆ.
ನ್ಯಾಯಾಲಯವು ತಪ್ಪಿತಸ್ಥರೆಂದು ಕಂಡುಕೊಳ್ಳುವವರೆಗೆ ಯಾರನ್ನಾದರೂ ತಪ್ಪಿತಸ್ಥರೆಂದು ಚಿತ್ರೀಕರಿಸುವ ಮೂಲಕ ಅಪರಾಧದ ದೃಶ್ಯವನ್ನು ಪ್ರಚಾರ ಮಾಡುವುದು ಕಾನೂನುಬಾಹಿರವಾಗಿದೆ. ದೇಶದ ಹಿತಾಸಕ್ತಿಗೆ ಹಾನಿಕಾರಕ, ಜೀವನದ ಸ್ವಾತಂತ್ರ್ಯ ಮತ್ತು ತನಿಖೆಯ ಮೇಲೆ ಪರಿಣಾಮ ಬೀರುವ ದೃಶ್ಯಗಳನ್ನು ಹಂಚಬಾರದು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.