ದಮ್ಮಾಮ್: ಕೆ.ಸಿ.ಎಫ್ ದಮ್ಮಾಮ್ ಝೋನ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ “ಹಿಜಿರಾ ಪಲಾಯನವಲ್ಲ ಹೊಸತನಕ್ಕೆ ಪಯಣ”, ಎಂಬ ಘೋಷ ವಾಕ್ಯದಡಿಯಲ್ಲಿ ಮುಹರ್ರಂ ಸಂದೇಶ ಕಾರ್ಯಕ್ರಮವು ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಹಫೂಫ್ ಸಅದಿಯಾ ಹಾಲ್ ನಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಹಬೀಬ್ ಮರ್ದಾಳ ಅಧ್ಯಕ್ಷತೆಯನ್ನು ವಹಿಸಿದ್ದರು,ಇಬ್ರಾಹಿಂ ಸ ಅದಿ ಮಚ್ಚಂಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಪ್ರಭಾಷಣರಾಗಿ ಆಗಮಿಸಿದ ಕೆ.ಸಿ.ಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಉಸ್ತಾದರು ಮುಹರ್ರಂ ತಿಂಗಳ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಮುಹರ್ರಂ ತಿಂಗಳಲ್ಲಿ ಪ್ರತ್ಯೇಕವಾಗಿ ಸುನ್ನತಿರುವ ಆಶೂರಾಹ್, ತಾಶೂಅಹ್ ವೃತದ ಮಹತ್ವವನ್ನು ತಿಳಿಸಿ ಪ್ರವಾಸಿ ಜೀವನವನ್ನು ನಡೆಸುವ ಸರ್ವ ಪ್ರವಾಸಿ ಸ್ನೇಹಿತರು ತಮ್ಮ ಜೀವನದಲ್ಲಿ ಅಳವಡಿಸಿ ವೃತವನ್ನು ಅಚರಿಸಬೇಕಾಗಿ ಕರೆಕೊಟ್ಟರು.
ಮುಖ್ಯ ಅಥಿತಿಯಾಗಿ ICF ನಾಯಕ ಅಬೂಬಕ್ಕರ್ ಮೊಗ್ರಾಲ್ ಹಾಗೂ ಸುರಿಬೈಲ್ ಅಶ್ಅರಿಯಾ ಹಾರಿಸ್ ಹನೀಫಿ ಭಾಗವಹಿಸಿದ್ದರು, ಕಾರ್ಯಕ್ರಮವನ್ನು ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಕಾಜೂರು ಸ್ವಾಗತಿಸಿ, ಅಶ್ರು ಬಜ್ಪೆ ಧನ್ಯವಾದಗೈದರು.