ದಮ್ಮಾಮ್: ಸಮಸ್ತ ಕೇರಳ ಮುಶಾವರ ಸದಸ್ಯರೂ,ಕರ್ನಾಟಕ ಸುನ್ನಿ ಕೊಡಿನೇಷನ್ ಅಧ್ಯಕ್ಷರಾಗಿದ್ದ ಶರಪುಲ್ ಉಲಮಾ ರವರ 40 ನೇ ದಿನದ ಪ್ರಯುಕ್ತ ಅನುಸ್ಮರಣಾ ಕಾರ್ಯಕ್ರಮ ಮತ್ತು ಹಜ್ ಸ್ವಯಂಸೇವಕರಿಗೆ ಅಭಿನಂದನಾ ಕಾರ್ಯಕ್ರಮ, ಅಲ್ ದವಾಸಿರ್ ಯುನಿಟ್ ದಮ್ಮಾಮ್ ವತಿಯಿಂದ ನಡೆಯುತು.
ಮೊದಲಿಗೆ ಮಾಸಿಕ ಮಹ್ಳರತುಲ್ ಬದ್ರಿಯಾ ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ರವರ ನೇತೃತ್ವದಲ್ಲಿ ನಡೆಯಿತು.
ನಂತರ ಸಭಾ ಕಾರ್ಯಕ್ರಮ ಕೆಸಿಎಫ್ ಅಲ್ ದವಾಸಿರ್ ಯುನಿಟ್ ಅಧ್ಯಕ್ಷರಾದ ಅಶ್ರಫ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಸ್ತಫಾ ತಂಙಳ್ ಆದೂರು ಉದ್ಘಾಟನೆಯನ್ನು ನೆರವೇರಿಸಿದರು.
ಅನುಸ್ಮರಣಾ ಪ್ರಬಾಷಣ ನಡೆಸಿದ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಶರಫುಲ್ ಉಲಮಾರು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಅಲೆ ಅಲೆಯಾಗಿ ವರ್ಣಿಸಿದರು.
ನಂತರ ಹಜ್ ಯಾತ್ರೆ ಮುಗಿಸಿಬಂದ ಹಬೀಬ್ ಸಖಾಫಿ ಉಸ್ತಾದ್ ರವರನ್ನು ಸಮಿತಿ ವತಿಯಿಂದ ಗೌರವಿಸಲಾಯುತು.
ಹಗಲು ರಾತ್ರಿ ಎನ್ನದೆ ಜಾತಿ ಮತ ಭೇದ ವಿಲ್ಲದೆ ಹಲವಾರು ಸಾಂತ್ವನ ಕಾರ್ಯಕ್ರಮ ಗಳನ್ನು ಕೆಸಿಎಫ್ ಮಾಡುವಾಗ ಇಂತಹ ಕಾರ್ಯಕರ್ತರು ನಮ್ಮ ಯುನಿಟ್ನಲ್ಲಿರುವುದು ನಮ್ಮ ಯುನಿಟ್ನ ಹೆಮ್ಮೆ, ಇಂತಹ ಕಾರ್ಯಕರ್ತರಲ್ಲಿ ಪ್ರಧಾನರಾದ ಭಾಷಾ ಗಂಗಾವಳಿ ಮತ್ತು ಜಾಬಿರ್ ಚಿಕ್ಕಮಂಗಳೂರು ರವರನ್ನು ಮೊಮೆಂಟೊ ನೀಡಿ ಗೌರವುಸಲಾಯುತು.
ಯುನಿಟ್ನ ಹಜ್ ಸ್ವಯಂಸೇವಕರಾದ ಖಾಲಿದ್ ನಂದಾವರ,ಅಬೂಬಕ್ಕರ್ ಕೊಡಗು,ಜಾಬಿರ್ ಚಿಕ್ಕಮಂಗಳೂರು, ಭಾಷ ಗಂಗಾವಳಿ,ಅಸ್ಲಂ ಜಯಪುರ ರವರನ್ನು ಯುನಿಟ್ ವತಿಯಿಂದ ಅತಿಥಿ ಗಣ್ಯರು ಕಾಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಸೆಕ್ಟರ್ ಅಧ್ಯಕ್ಷರಾದ ಶಿಯಾಬುದ್ದೀನ್ ಸಖಾಫಿ,ಕೆಸಿಎಫ್ ಅಂತರಾಷ್ಟ್ರೀಯ ಸದಸ್ಯ ಉಮರುಲ್ ಫಾರೂಖ್ ಕಾಟಿಪಳ್ಳ, ಮುಹಮ್ಮದ್ ಸಖಾಫಿ ತಲಕ್ಕಿ,ಫೈಝಲ್ ಕೃಷ್ಣಾಪುರ, ಅಬ್ದುಲ್ ಅಝೀಝ್ ಮುಸ್ಲಿಯಾರ್,ಅಶ್ರಫ್ ನಾವುಂದ ಮೊದಲಾದವರು ಉಪಸ್ಥಿತರಿದ್ದರು.
ಇಕ್ಬಾಲ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.
ಹಬೀಬ್ ಸಖಾಫಿ ಸ್ವಾಗತಿಸಿದರು.
ಕಾರ್ಯದರ್ಶಿ ಖಾಲಿದ್ ನಂದಾವರ ಧನ್ಯವಾದಗೈದರು.
ವರದಿ: ಇಕ್ಬಾಲ್ ಕೈರಂಗಳ