ಕುವೈತ್: ಕರ್ನಾಟಕ ಕಲ್ಚರಲ್ ಫೌಂಡೇಶನ್
ಕೆಸಿಎಫ್ ಕುವೈತ್ ಸೌತ್ ಝೋನ್ ವತಿಯಿಂದ ದಿನಾಂಕ 6/9/2019 ಶುಕ್ರವಾರ ಮಗ್ರಿಬ್ ನಮಾಝ್ ನ ನಂತರ ಮೆಹಬುಲದ ಕಲಾ ಅಡಿಟೋರಿಯಂನಲ್ಲಿ ಮುಹರ್ರಂ ತಿಂಗಳ ಪ್ರಯುಕ್ತ ಹಿಜರಿ ಸಂದೇಶ ಎಂಬ ಕಾರ್ಯಕ್ರಮವು ಸೌತ್ ಝೋನ್ ಶಿಕ್ಷಣ ವಿಭಾಗದ ಕನ್ವಿನರ್ ನೌಶಾದ್ ಕೊಡಗು ಅವರ ಕಿರಾಹತ್ ನೊಂದಿಗೆ ಸೌತ್ ಝೋನ್ ಅಧ್ಯಕ್ಷರಾದ ಜನಾಬ್ ಅಹ್ಮದ್ ಬಾವ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೌತ್ ಝೋನ್ ಕಾರ್ಯದರ್ಶಿ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಸ್ವಾಗತ ಕೋರಿದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿಜರಿ ಸಂದೇಶ ವನ್ನು ಕುವೈತ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಬಾದುಶಾ ಸಖಾಫಿ ಉಸ್ತಾದ್ ರವರು ನೀಡಿದರು. ರಾಷ್ಟ್ರೀಯ ಸಮಿತಿ ಸದಸ್ಯರಾದ ಬಹುಮಾನ್ಯ ಉಮರುಲ್ ಫಾರೂಕ್ ಸಖಾಫಿ ಉಸ್ತಾದ್ ರವರು ಹಿಜ್ರಾ ಪಲಾಯನ ವಲ್ಲ ಹೊಸ ತನಕ್ಕೆ ಪಯಣ ಎಂಬ ವ್ಯಾಖ್ಯಾನ ವನ್ನು ಪ್ರಸ್ತಾಪಿಸಿ ಕನ್ನಡದಲ್ಲಿ ಸವಿವರವಾಗಿ ತಿಳಿಸಿದರು.
ಮಹಬುಲ ಸೆಕ್ಟರ್ ಕಾರ್ಯದರ್ಶಿ ಜನಾಬ್ ಮುನೀರ್ ಕಾರ್ಕಳ ಉರ್ದು ವಿನಲ್ಲಿ ಮೂಹರ್ರಂ ತಿಂಗಳ ಬಗ್ಗೆ ವಿವರಿಸಿದರು.
ಮಹಬುಲ ಸೆಕ್ಟರ್ ನ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದ್ ಹಾಗು
ಕೆಸಿಎಫ್ ಅಂತಾರಾಷ್ಟ್ರೀಯ ಸಂಘಟನಾ ವಿಭಾಗ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್, ಕೆಸಿಎಫ್ ಕುವೈತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಕರಿಯಾ ಆನೇಕಲ್, ಕೆಸಿಎಫ್ ಕುವೈತ್ ರಾಷ್ಟ್ರೀಯ ಸಾಂತ್ವನ ವಿಭಾಗದ ಅಧ್ಯಕ್ಷ ಯಾಕುಬ್ ಕಾರ್ಕಳರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಆಶಂಷ ಬಾಷಣಗೈದರು.
ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಆಗಿ ಆಯ್ಕೆಯಾದ ಕುವೈತ್ ಕೆಸಿಎಫ್ ನ ಬಹುಮಾನ್ಯ ಹುಸೈನ್ ಎರ್ಮಾಡ್,ಹಾಗೂ ಅಂತರರಾಷ್ಟ್ರೀಯ ಸಮಿತಿ ಕೌನ್ಸಿಲರ್ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೆಸಿಎಫ್ ಕುವೈತ್ ರಾಷ್ಟ್ರೀಯ ಫೈನಾನ್ಸಿಯಲ್ ಸೆಕ್ರಟರಿ ಮೂಸ ಇಬ್ರಾಹಿಂ, ಬಹುಮಾನ್ಯ ಜಬ್ಬಾರ್ ಮದನಿ ಉಸ್ತಾದ್, ಕುವೈತ್ ಐಸಿಎಫ್ ನಾಯಕರು ಉಪಸ್ಥಿತರಿದ್ದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರ ಭಕ್ತಿ ನಿರ್ಭರ ದುವಾದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಕೊನೆಯಲ್ಲಿ ಕೆಸಿಎಫ್ ಕುವೈತ್ ಸೌತ್ ಝೋನ್ ಸಂಘಟನಾ ಕಾರ್ಯದರ್ಶಿ ಹಸೈನಾರ್ ಮೊಂಟೆಪದವು ಧನ್ಯವಾದಗೈದರು.
🖋
ವರದಿ :ಇಬ್ರಾಹಿಂ ವೇಣೂರು
ಪ್ರಚಾರ ಹಾಗೂ ಪ್ರಕಾಶನ ವಿಭಾಗ