janadhvani

Kannada Online News Paper

ಡಿಕೆಶಿ ಬಿಡುಗಡೆಯಾದಲ್ಲಿ ಖುಷಿಪಡುತ್ತೇನೆ – ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನದಿಂದ ತಮಗೆ ಸಂತೋಷವಾಗಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಬಂಧನ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್ ಬಂಧನಕ್ಕೆ ತಮಗೆ ಸಂತೋಷವಾಗಿಲ್ಲ.ಅವರು ಆರೋಪಗಳಿಂದ ಮುಕ್ತರಾಗಿ ಹೊರಗೆ ಬಂದರೆ ನಾನು ಕೂಡಾ ಖುಷಿಪಡುತ್ತೇನೆ ಎಂದು ಅಚ್ಚರಿಯ ರೀತಿಯ ಹೇಳಿಕೆ ನೀಡಿದರು.

ನನ್ನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ, ಡಿಕೆ ಶಿವಕುಮಾರ್ ಅವರಿಗೂ ಕೇಡನ್ನೂ ಬಯಸುವುದಿಲ್ಲ. ತನಿಖಾ ಸಂಸ್ಥೆಗಳು ಕಾನೂನು ಪ್ರಕಾರ ತನಿಖೆ ನಡೆಸುತ್ತಿವೆ. ಡಿಕೆ ಶಿವಕುಮಾರ್ ಆರೋಪಗಳಿಂದ ಮುಕ್ತರಾಗಿ ಬರಲಿ ಎಂದು ಆಶಿಸುವುದಾಗಿ ಹೇಳಿದರು.