janadhvani

Kannada Online News Paper

ಭದ್ರತಾ ಸಮಸ್ಯೆ: ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳಿಗೆ ಒಮಾನ್ ಏರ್‌ನಲ್ಲಿ ನಿರ್ಬಂಧ

ಮಸ್ಕತ್: ಭದ್ರತಾ ಕಾರಣಗಳಿಗಾಗಿ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳನ್ನು ಒಮಾನ್ ಏರ್‌ನಲ್ಲಿ ನಿರ್ಬಂಧಿಸಲಾಗಿದೆ. ಚೆಕ್-ಇನ್ ಲಗೇಜ್‌ನಲ್ಲಿ ಇವುಗಳನ್ನು ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮ್ಯಾಕ್ ಬುಕ್ ಪ್ರೊ ಅನ್ನು ಚೆಕ್-ಇನ್ ಲಗೇಜ್‌ನಲ್ಲಿ ಸಾಗಿಸಲು ಸಾಧ್ಯವಿಲ್ಲವಾದರೂ, ಕ್ಯಾಬಿನ್ ಬ್ಯಾಗೇಜ್ ನೊಂದಿಗೆ ಇವುಗಳನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಆದರೆ ಮ್ಯಾಕ್‌ಬುಕ್ಸ್ ಅನ್ನು ಪ್ರಯಾಣದ ವೇಳೆ ಆಫ್ ಮಾಡಿ ಇಡಬೇಕು. ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಪಂಚದಾದ್ಯಂತದ ವಿವಿಧ ವಿಮಾನಯಾನ ಸಂಸ್ಥೆಗಳು ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿವೆ.

ಬ್ಯಾಟರಿಗಳು ಸುಡುವ ಸಾಧ್ಯತೆಯಿದೆ ಎಂದು ಹಲವಾರು ವಿಮಾನಯಾನ ಸಂಸ್ಥೆಗಳು ಇತ್ತೀಚೆಗೆ ಮ್ಯಾಕ್‌ಬುಕ್ ಪ್ರೊ 15 ಇಂಚಿನ ಮಾದರಿಗಳನ್ನು ನಿಷೇಧಿಸಿವೆ. 2015ರ ಸೆಪ್ಟೆಂಬರ್‌ನಿಂದ 2017 ರ ಫೆಬ್ರವರಿ ವರೆಗೆ ಮಾರಾಟವಾದ ಕಂಪ್ಯೂಟರ್‌ಗಳಿಗೆ ಕೂಡ ಇಂತಹ ಸಮಸ್ಯೆಗಳಿವೆ ಎನ್ನಲಾಗಿದೆ.